
ವಿಜಯಪುರ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಶಾಸಕ ಶಿವಾನಂದ ಪಾಟೀಲ ಅವರು ಶ್ರೀ ರಾಯರ ದರ್ಶನ ಪಡೆದು, ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಸರ್ವರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ದರ್ಶನ ಪಡೆದು, ನಾಡಿನ ಜನತೆ ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವ ಮತ್ತಷ್ಟು ಬಲಗೊಳ್ಳಲಿ. ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ ಮತ್ತು ನೆಮ್ಮದಿ ನೆಲೆಸಲಿ ಎಂದು ಶ್ರೀ ರಾಯರಲ್ಲಿ ಆಶಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಪತ್ರಕರ್ತ
ಗೋಪಾಲ್ ಕುಲಕರ್ಣಿ ಅವರಿಂದ ಶಾಸಕ ಶಿವಾನಂದ ಪಾಟೀಲ ಅವರು ಸನ್ಮಾನ ಸ್ವೀಕರಿಸಿದರು. ಹಿರಿಯರ ಪ್ರೀತಿ, ಗೌರವ ಹಾಗೂ ಆಶೀರ್ವಾದವನ್ನು ಆತ್ಮೀಯವಾಗಿ ಸ್ವೀಕರಿಸಿದ ಅವರು, ಹಿರಿಯರ ಮಾರ್ಗದರ್ಶನ ಮತ್ತು ಆಶೀರ್ವಾದ ಸದಾ ಸಮಾಜಕ್ಕೆ ದಾರಿದೀಪವಾಗಿರುತ್ತದೆ ಎಂದು ಹೇಳಿದರು.
“ಶ್ರೀ ರಾಯರ ಕೃಪೆ ಹಾಗೂ ಹಿರಿಯರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ದೊರೆಯಲಿ ಹಾಗೂ ಪ್ರತಿಯೊಬ್ಬರ ಬದುಕು ನೆಮ್ಮದಿಯಿಂದ ಕೂಡಿರಲಿ” ಎಂದು ಶಾಸಕ ಶಿವಾನಂದ ಪಾಟೀಲ ಅವರು ಆಶಯ ವ್ಯಕ್ತಪಡಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪವಿತ್ರ ವಾತಾವರಣದಲ್ಲಿ ನಡೆದ ಈ ಭೇಟಿ ಭಕ್ತಿಭಾವದಿಂದ ಕೂಡಿತ್ತು. ಈ ಸಂದರ್ಭದಲ್ಲಿ ಭಕ್ತರು, ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande