ಭಾರತ-ಬೆಲ್ಜಿಯಂ ರಕ್ಷಣಾ ಸಹಕಾರ ಬಲಪಡಿಸಲು ಒತ್ತು: ರಾಜನಾಥ್ ಸಿಂಗ್
ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಬೆಲ್ಜಿಯಂನ ರಕ್ಷಣಾ ಮತ್ತು ವಾಣಿಜ್ಯ ಸಚಿವ ಥಿಯೋ ಫ್ರಾಂಕನ್ ಅವರೊಂದಿಗೆ ನವದೆಹಲಿಯಲ್ಲಿ ಫಲಪ್ರದ ಸಭೆ ನಡೆಸಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ‘ಎಕ್ಸ್‌’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಭಾರತ-ಬೆಲ್ಜಿಯಂ ನಡುವಿ
ಭಾರತ-ಬೆಲ್ಜಿಯಂ ರಕ್ಷಣಾ ಸಚಿವರೊಂದಿಗೆ ರಾಜನಾಥ ಸಿಂಗ್ ಸಭೆ


ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಬೆಲ್ಜಿಯಂನ ರಕ್ಷಣಾ ಮತ್ತು ವಾಣಿಜ್ಯ ಸಚಿವ ಥಿಯೋ ಫ್ರಾಂಕನ್ ಅವರೊಂದಿಗೆ ನವದೆಹಲಿಯಲ್ಲಿ ಫಲಪ್ರದ ಸಭೆ ನಡೆಸಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

‘ಎಕ್ಸ್‌’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಭಾರತ-ಬೆಲ್ಜಿಯಂ ನಡುವಿನ ರಕ್ಷಣಾ ಸಂಬಂಧಗಳು ಹಾಗೂ ರಕ್ಷಣಾ ಕೈಗಾರಿಕಾ ಸಹಕಾರದ ಸಮಗ್ರ ಆಯಾಮಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಕ್ಷಣಾ ಕೈಗಾರಿಕಾ ಸಹಕಾರದಡಿ ಹಲವು ತಿಳಿವಳಿಕೆ ಒಪ್ಪಂದಗಳು ಹಾಗೂ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಬೆಲ್ಜಿಯಂನ ತಂತ್ರಜ್ಞಾನವನ್ನು ಭಾರತದ ಕೌಶಲ್ಯ ಮತ್ತು ಉತ್ಪಾದನಾ ಸಾಮರ್ಥ್ಯದೊಂದಿಗೆ ಸಂಯೋಜಿಸಿ ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande