ಅಮೆರಿಕ–ಇರಾನ್ ನಡುವೆ ಔಪಚಾರಿಕ ಮಾತುಕತೆ ಇಲ್ಲ, ಅನೌಪಚಾರಿಕ ಸಂಪರ್ಕ ಮುಂದುವರಿಕೆ: ಗ್ರಾಸಿ
ವಿಶ್ವಸಂಸ್ಥೆ, 29 ಸೆಪ್ಟೆಂಬರ್ 29 (ಹಿ.ಸ.): ಅಮೆರಿಕ ಮತ್ತು ಇರಾನ್ ನಡುವೆ ಸದ್ಯ ಯಾವುದೇ ಔಪಚಾರಿಕ ಮಾತುಕತೆ ನಡೆಯುತ್ತಿಲ್ಲ. ಆದರೆ ಎರಡೂ ದೇಶಗಳ ನಡುವೆ ಅನೌಪಚಾರಿಕ ಸಂಪರ್ಕ ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮಹಾನಿರ್ದೇಶಕ ರಫೇಲ್ ಗ್ರಾಸಿ ತಿಳಿಸಿದ್ದಾರೆ. ರಿಯಾ ನೊವೊ
ಅಮೆರಿಕ–ಇರಾನ್ ನಡುವೆ ಔಪಚಾರಿಕ ಮಾತುಕತೆ ಇಲ್ಲ, ಅನೌಪಚಾರಿಕ ಸಂಪರ್ಕ ಮುಂದುವರಿಕೆ: ಗ್ರಾಸಿ


ವಿಶ್ವಸಂಸ್ಥೆ, 29 ಸೆಪ್ಟೆಂಬರ್ 29 (ಹಿ.ಸ.):

ಅಮೆರಿಕ ಮತ್ತು ಇರಾನ್ ನಡುವೆ ಸದ್ಯ ಯಾವುದೇ ಔಪಚಾರಿಕ ಮಾತುಕತೆ ನಡೆಯುತ್ತಿಲ್ಲ. ಆದರೆ ಎರಡೂ ದೇಶಗಳ ನಡುವೆ ಅನೌಪಚಾರಿಕ ಸಂಪರ್ಕ ಮುಂದುವರಿದಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮಹಾನಿರ್ದೇಶಕ ರಫೇಲ್ ಗ್ರಾಸಿ ತಿಳಿಸಿದ್ದಾರೆ.

ರಿಯಾ ನೊವೊಸ್ತಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕ ಮತ್ತು ಇರಾನ್ ನಡುವೆ ಪ್ರಸ್ತುತ ಯಾವುದೇ ಔಪಚಾರಿಕ ಮಾತುಕತೆ ಪ್ರಕ್ರಿಯೆ ನಡೆಯುತ್ತಿಲ್ಲ. ಆದರೆ ಎರಡೂ ಕಡೆಯವರ ನಡುವೆ ವಿವಿಧ ಹಂತಗಳಲ್ಲಿ ಸಂಪರ್ಕವಿದ್ದು, ಈ ವಾರ ನ್ಯೂಯಾರ್ಕ್‌ನಲ್ಲಿ ನಡೆದ ಮಾತುಕತೆಯೂ ಇದರಲ್ಲಿ ಸೇರಿದೆ ಎಂದು ಹೇಳಿದರು.

ನ್ಯೂಯಾರ್ಕ್‌ನಲ್ಲಿ ನಡೆದ ಮಾತುಕತೆ ಸದ್ಯಕ್ಕೆ ಸಾಕಷ್ಟು ಅನೌಪಚಾರಿಕವಾಗಿದ್ದರೂ, ಅದು ಮುಂದುವರಿಯುತ್ತಿದೆ. ಈ ಸಂಪರ್ಕಗಳ ಮೂಲಕ ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಔಪಚಾರಿಕ ಮಾತುಕತೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಗ್ರಾಸಿ ಆಶಾಭಾವನೆ ವ್ಯಕ್ತಪಡಿಸಿದರು.

ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲೇ ಗ್ರಾಸಿ ಅವರ ಈ ಹೇಳಿಕೆ ಹೊರಬಿದ್ದಿದೆ. ಅನೌಪಚಾರಿಕ ಸಂಪರ್ಕಗಳು ಮುಂದಿನ ರಾಜತಾಂತ್ರಿಕ ಪ್ರಕ್ರಿಯೆಗೆ ಆಧಾರವಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande