ವೈಟ್ ಫೀಲ್ಡ್ ಮೆಟ್ರೊ ವಿಸ್ತರಣೆಗೆ ಹೊಸ ಗುತ್ತಿಗೆ
₹64.82 ಕೋಟಿಗೆ ಕಾಮಗಾರಿ
bmrcl-awards-contract-for-purple-line-extension-beyond-whitefield


ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):

ವೈಟ್ಫೀಲ್ಡ್ (ಕಾಡುಗೋಡಿ) ಮೆಟ್ರೊ ನಿಲ್ದಾಣದಾಚೆಗೆ ಪರ್ಪಲ್ ಲೈನ್ ವಿಸ್ತರಿಸುವ ಕಾಮಗಾರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ ಹೊಸ ಗುತ್ತಿಗೆ ನೀಡಿದೆ.

482.80 ಮೀಟರ್ ಉದ್ದದ ಮೆಟ್ರೊ ಮಾರ್ಗ ವಿಸ್ತರಣೆಗೆ ₹64.82 ಕೋಟಿ ಮೊತ್ತದ ಗುತ್ತಿಗೆಯನ್ನು ಮಿಲನ್ ರೋಡ್ ಬಿಲ್ಡ್ಟೆಕ್ ಎಲ್ಎಲ್ಪಿ ಪಡೆದುಕೊಂಡಿದೆ. ಕಾಮಗಾರಿ ಪೂರ್ಣಗೊಳಿಸಲು 548 ದಿನಗಳ ಗಡುವು ನಿಗದಿಪಡಿಸಲಾಗಿದೆ.

ವೈಟ್ಫೀಲ್ಡ್ ಮೆಟ್ರೊ ನಿಲ್ದಾಣದಾಚೆಗೆ ಮೆಟ್ರೊ ಮಾರ್ಗವನ್ನು ವಿಸ್ತರಿಸುವ ಉದ್ದೇಶದಿಂದ 2024ರಲ್ಲಿ BMRCL ಎಂ. ವೆಂಕಟ ರಾವ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ₹48.62 ಕೋಟಿ ಮೊತ್ತದ ಗುತ್ತಿಗೆ ನೀಡಿತ್ತು.

ಆಗ ಸುಮಾರು 588 ಮೀಟರ್ ಉದ್ದದ ವಿಸ್ತರಣೆ ಹಾಗೂ ವೈಟ್ಫೀಲ್ಡ್ ಡಿಪೋದ ಮೂರನೇ ಮಾರ್ಗವನ್ನು 28 ಮೀಟರ್ ವಿಸ್ತರಿಸುವ ಕಾಮಗಾರಿ ಒಳಗೊಂಡಿತ್ತು.

ಬಳಿಕ ಆ ಗುತ್ತಿಗೆ ರದ್ದುಗೊಂಡಿದ್ದು, ಇದೀಗ BMRCL ಹೊಸ ಟೆಂಡರ್ ಪ್ರಕ್ರಿಯೆ ಮೂಲಕ ಕಾಮಗಾರಿಗೆ ಗುತ್ತಿಗೆದಾರರನ್ನು ಆಯ್ಕೆ ಮಾಡಿದೆ. ಹೊಸ ಯೋಜನೆಯಡಿ ವೈಟ್ಫೀಲ್ಡ್ ಮೆಟ್ರೊ ನಿಲ್ದಾಣದಾಚೆಗೆ 482.80 ಮೀಟರ್ ಮಾರ್ಗ ನಿರ್ಮಾಣವಾಗಲಿದೆ.

ಈ ವಿಸ್ತರಣೆಯಿಂದ ವೈಟ್ಫೀಲ್ಡ್ ನಿಲ್ದಾಣದಲ್ಲಿ ರೈಲುಗಳ ಸಂಚಾರ ನಿರ್ವಹಣೆ ಮತ್ತು ರೈಲುಗಳ ತಿರುಗುವಿಕೆ ವ್ಯವಸ್ಥೆಗೆ ಅನುಕೂಲವಾಗುವ ನಿರೀಕ್ಷೆಯಿದೆ. 2024ರ ಯೋಜನೆಯ ಪ್ರಕಾರ, ವಿಸ್ತರಣೆಯ ಪ್ರಮುಖ ಉದ್ದೇಶ ರೈಲುಗಳ ಕಾರ್ಯಾಚರಣೆಯನ್ನು ಸುಗಮಗೊಳಿಸುವುದು ಮತ್ತು ಹೆಚ್ಚಿನ ಆವೃತ್ತಿಯಲ್ಲಿ ರೈಲು ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿತ್ತು.

2024ರಲ್ಲಿ ನೀಡಲಾಗಿದ್ದ ಹಿಂದಿನ ಗುತ್ತಿಗೆದಾರ ಕಾಮಗಾರಿ ಆರಂಭಿಸಿದ್ದರೂ, ಇದೀಗ ಹೊಸ ಟೆಂಡರ್ ಮೂಲಕ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande