ಕಲೆ ರಕ್ತಗತವಾಗಿದ್ದಲ್ಲಿ ಕಲಾವಿದ ಜನಪ್ರಿಯ : ಸಾಹಿತಿ ಮಲ್ಲಿಕಾರ್ಜುನಸ್ವಾಮಿ
ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.) ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಪುರುಷೋತ್ತಮ ಹಂದ್ಯಾಳು ಅವರ ಅಭಿನಯವು ರಕ್ತಗತ ಹಾಗೂ ವಂಶಪರೆಯಿಂದ ಕೂಡಿದೆ ಎಂದು ವಿಶ್ರಾಂತ ಡಿಡಿಪಿಐ, ಸಾಹಿತಿ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ತಿಳಿಸಿದ್ದಾರೆ. `ವೃಷಾಂಕ್ ಆಪ್ಟಿಕಲ್ಸ್ ಗೆಳೆಯರ ಬಳಗ'' ಏರ
ಕಲೆ ರಕ್ತಗತವಾಗಿದ್ದಲ್ಲಿ ಕಲಾವಿದ ಜನಪ್ರಿಯ : ಸಾಹಿತಿ ಮಲ್ಲಿಕಾರ್ಜುನಸ್ವಾಮಿ


ಕಲೆ ರಕ್ತಗತವಾಗಿದ್ದಲ್ಲಿ ಕಲಾವಿದ ಜನಪ್ರಿಯ : ಸಾಹಿತಿ ಮಲ್ಲಿಕಾರ್ಜುನಸ್ವಾಮಿ


ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.)

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಪುರುಷೋತ್ತಮ ಹಂದ್ಯಾಳು ಅವರ ಅಭಿನಯವು ರಕ್ತಗತ ಹಾಗೂ ವಂಶಪರೆಯಿಂದ ಕೂಡಿದೆ ಎಂದು ವಿಶ್ರಾಂತ ಡಿಡಿಪಿಐ, ಸಾಹಿತಿ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ತಿಳಿಸಿದ್ದಾರೆ.

`ವೃಷಾಂಕ್ ಆಪ್ಟಿಕಲ್ಸ್ ಗೆಳೆಯರ ಬಳಗ' ಏರ್ಪಡಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದ್ಯಾಳು ಅವರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿದ ಅವರು, ರಂಗ ಕಲಾವಿದರಾಗಿದ್ದ ಜಿ. ಹನುಮಂತಪ್ಪ ಅವರ ಪುತ್ರ ಪುರುಷೋತ್ತಮ ಹಂದ್ಯಾಳು, ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ರಂಗಭೂಮಿಯಲ್ಲಿ ಪಾತ್ರಗಳಲ್ಲಿ

ಜೀವ ತುಂಬುವ ಮೂಲಕ ಕಲಾವಿದರಾಗಿ ಜನಾನುರಾಗಿ ಆಗಿದ್ದಾರೆ ಎಂದರು.

ಮುಖ್ಯ ಅತಿಥಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಅವರು, ಪುರುಷೋತ್ತಮ ಅವರು ಛಾಯಾಗ್ರಾಹಕ ವೃತ್ತಿಯ ಜೊತೆಯಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಅನನ್ಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭಧ್ರಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಎರಡು ದಶಕಗಳ ಕಾಲ ಪತ್ರಿಕೋದ್ಯಮದ ಒಡನಾಟದಲ್ಲಿದ್ದು ಸರಳಜೀವಿಯಾಗಿದ್ದಾರೆ. ರಂಗಭೂಮಿಯಲ್ಲಿ ಅನುಭಾವಿ ಆಗಿರುವ ಇವರು ಪ್ರಶಸ್ತಿಗೆ ಅರ್ಹರು ಎಂದರು.

ಪತ್ರಕರ್ತ ನರಸಿಂಹ ಮೂರ್ತಿ ಕುಲಕರ್ಣಿ ಅವರು, ಸ್ನೇಹಜೀವಿ ಪುರುಷೋತ್ತಮ ಅವರ ರಂಗ ಪಯಣ ಯಶಸ್ವಿಯಾಗಿ ಮುಂದುವರೆಯಲಿ. ರಾಷ್ಟ್ರಮಟ್ಟದಲ್ಲಿ ರಾರಾಜಿಸಲಿ ಎಂದರು.

ಅಭಿನಂದನೆಯನ್ನು ಸ್ವೀಕರಿಸಿದ ಪುರುಷೋತ್ತಮ ಹಂದ್ಯಾಳ್ ಅವರು, ಸ್ನೇಹಿತರ ಪ್ರೀತಿ ವಾತ್ಸಲ್ಯಗಳಿಗೆ ನಾನು ಅಭಾರಿ ಎಂದರು.

ಶ್ರೀಮತಿ ಸರ್ವಮಂಗಳಾ ಮಂಜುನಾಥ, ಪಾರ್ವತಿ ವಿರೂಪಾಕ್ಷಯ್ಯ, ಪೂಜಾ ಮಂಜುನಾಥ, ವೃಷಾಂಕ ಆಫ್ಟಿಕಲ್ಸ್ ನ ಮಂಜುನಾಥ್ ಶರ್ಮ, ಛಾಯಾಗ್ರಾಹಕರಾದ ಕೆ.ಎಂ. ವಿರುಪಾಕ್ಷಯ್ಯ, ಬಿ. ಮಂಜುನಾಥ, ರಾಘವೇಂದ್ರ ಆಚಾರ್, ಉಮಾಮಹೇಶ್ವರ, ವಾಗೀಶ್ ಸ್ವಾಮಿ, ಪಂಚಾಕ್ಷರಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande