ಹರಗಿನಡೋಣಿಯಲ್ಲಿ ಕಬ್ಬಿಣದ ಅದಿರು ಸಂಸ್ಕರಣಾ ಘಟಕ: ಅ.27ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆ
ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.) ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಮೇ.ಗೋಲ್ಡನ್ ಲೈನ್ ಸಂಸ್ಥೆಯು ವಾರ್ಷಿಕ 10,00,000 ಟನ್ ಉತ್ಪಾದನಾ ಸಾಮರ್ಥ್ಯದ ಕಬ್ಬಿಣದ ಅದಿರು ಬೆನಿಫಿಸಿಯೇಷನ್ ಘಟಕವನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಯನ್ನು ಗ್ರಾಮದ ಸರ್ವೆ ನಂಬರ್ 133/2, 133/3
ಹರಗಿನಡೋಣಿಯಲ್ಲಿ ಕಬ್ಬಿಣದ ಅದಿರು ಸಂಸ್ಕರಣಾ ಘಟಕ: ಅ.27ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆ


ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.)

ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಮೇ.ಗೋಲ್ಡನ್ ಲೈನ್ ಸಂಸ್ಥೆಯು ವಾರ್ಷಿಕ 10,00,000 ಟನ್ ಉತ್ಪಾದನಾ ಸಾಮರ್ಥ್ಯದ ಕಬ್ಬಿಣದ ಅದಿರು ಬೆನಿಫಿಸಿಯೇಷನ್ ಘಟಕವನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಯನ್ನು ಗ್ರಾಮದ ಸರ್ವೆ ನಂಬರ್ 133/2, 133/3, 133/4, 121/2 ಮತ್ತು 121/1 ರಲ್ಲಿನ ಒಟ್ಟು 14.04 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಪರಿಸರ ಆಘಾತ ಅಧ್ಯಯನ ಅಧಿಸೂಚನೆ ನಿಯಮಾವಳಿಗಳ ಅನ್ವಯ, ಈ ಯೋಜನೆಗೆ ಸಂಬ0ಧಿಸಿದ0ತೆ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಅಕ್ಟೋಬರ್ 27ರಂದು ಬೆಳಿಗ್ಗೆ 11:00 ಗಂಟೆಗೆ ಆಯೋಜಿಸಲಾಗಿದೆ.

ಸಭೆಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ಪ್ರಸ್ತಾಪಿತ ಯೋಜನಾ ಸ್ಥಳವಾದ ಹರಗಿನಡೋಣಿ ಗ್ರಾಮದ ನಿಗದಿತ ಸರ್ವೆ ನಂಬರ್ಗಳಲ್ಲಿ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande