ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ : ಲೇಖಕ ಸಿದ್ದರಾಮ ಕಲ್ಮಠ
ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.): ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಮಾಧ್ಯಮಗಳಲ್ಲಿಯ ಸೃಜನಶೀಲತೆಯನ್ನು ಪ್ರೋತ್ಸಾಹಿಸಿ ಉಳಿಸಿ - ಬೆಳೆಸಬೇಕಾದ ಅಗತ್ಯವಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಸಿದ್ದರಾಮ ಕಲ್ಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುಗ್
ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ : ಲೇಖಕ ಸಿದ್ದರಾಮ ಕಲ್ಮಠ


ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ : ಲೇಖಕ ಸಿದ್ದರಾಮ ಕಲ್ಮಠ


ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.):

ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಮಾಧ್ಯಮಗಳಲ್ಲಿಯ ಸೃಜನಶೀಲತೆಯನ್ನು ಪ್ರೋತ್ಸಾಹಿಸಿ ಉಳಿಸಿ - ಬೆಳೆಸಬೇಕಾದ ಅಗತ್ಯವಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಸಿದ್ದರಾಮ ಕಲ್ಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಗ್ಗರಹಟ್ಟಿಯಲ್ಲಿ ಇರುವ ಶಿವ ದೀಕ್ಷಾ ಮಂದಿರದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಆಯೋಜಿಸಿದ್ದ `ಚಂದ್ರಮ ಕಲಾ ಸಂಭ್ರಮ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ. ಸಂಗೀತ, ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ನೃತ್ಯ ಸೇರಿ ವಿವಿಧ ಕಲಾ ಪ್ರಕಾರಗಳಲ್ಲಿ ಮನುಷ್ಯನ ಭಾವನೆ, ಅನುಭವ, ಚಿಂತನೆ ಹಾಗೂ ಬದುಕಿನ ಸೌಂದರ್ಯ ಪ್ರಸ್ತುತಗೊಳ್ಳುತ್ತದೆ. ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜದ ಸಂಸ್ಕøತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಸಾಧನವಾಗಿದೆ ಎಂದರು.

ಇಂದಿನ ವೇಗದ ಬದುಕಿನಲ್ಲಿ ಸೃಜನಶೀಲತೆಗೆ ಹೆಚ್ಚಿನ ಅವಕಾಶ ದೊರೆಯುತ್ತಿಲ್ಲ. ತಕ್ಷಣದ ಜನಪ್ರಿಯತೆ, ಪ್ರಚಾರ ಮತ್ತು ಹೆಗ್ಗಳಿಕೆಗೆ ಜನಮನಸೋತಿರುವುದು ವಿಷಾಧನೀಯ. ಯುವ ಪೀಳಿಗೆಯಲ್ಲಿ ಸೃಜನಶೀಲ ಚಿಂತನೆ, ಆತ್ಮವಿಶ್ವಾಸ ಮತ್ತು ನಮ್ಮ ನೆಲದ ಸಂಸ್ಕøತಿ - ಸಂಸ್ಕಾರದ ಅಭಿಮಾನದ ಅಗತ್ಯವಿದೆ ಎಂದರು.

ರೌಡಕುಂದದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಕನ್ನಡ ನಾಡಿನ ಅರಸರು ಹಿಂದಿನಿಂದಲೂ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದಾರೆ. ನಮ್ಮ ನಾಡಿನ ಪರಂಪರೆಯನ್ನು ಜೀವಂತವಾಗಿ ಇರಿಸುವಲ್ಲಿ ಮಠಮಾನ್ಯಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.

ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಗಿರಿಜಾಪತಿ ಅವರು ಕಾಂiÀರ್iಕ್ರಮದ ಅಧ್ಯಕ್ಷತೆವಹಿಸಿ, ಕರ್ನಾಟಕ

ಸರ್ಕಾರ ಗಡಿ ಭಾಗದ ಕಲಾವಿದರನ್ನು ಗುರುತಿಸಿ, ಅವರ ಕಲಾ ಪ್ರತಿಭೆಗೆ ಅನುಗುಣವಾಗಿ ಸೂಕ್ತ ಪೆÇ್ರೀತ್ಸಾಹ ಮತ್ತು ಅವಕಾಶಗಳನ್ನು ನೀಡಬೇಕು ಎಂದು ಹೇಳಿದರು.

ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ. ಹೊನ್ನೂರುಸ್ವಾಮಿ, ರಂಗ ಕಲಾವಿದೆ ರೇಣುಕಾ ಬಾವಳ್ಳಿ, ಲತಾ, ಶಿವದೀಕ್ಷಾ ಮಂದಿರದ ಕೆ. ರಾಜಶೇಖರಗೌಡ, ಕುರುಗೋಡು ಬಸಾಪುರದ ಶಾಲೆಯ ಬಡ್ತಿ ಮುಖ್ಯೋಪಾಧ್ಯಾಯ ಎಚ್.ಕೆ. ತಿಪ್ಪೇಸ್ವಾಮಿ, ಗಾಯಕ ಕೆ.ಜಿ. ಶಿವಕುಮಾರ ಅವರು ವೇದಿಕೆಯಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande