
ಬಳ್ಳಾರಿ, 28 ಸೆಪ್ಟೆಂಬರ್ (ಹಿ.ಸ.)
ಬಳ್ಳಾರಿ ನಗರ ನಿವಾಸಿ, ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾಗಿದ್ದ ಬಿ. ರುದ್ರಗೌಡ (82) ಅವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದು, ಮೃತರ ಅಂತ್ಯಕ್ರಿಯೆಯು ಬುಧವಾರ ನಡೆಯಲಿದೆ.
ಮೃತರು ಪತ್ನಿ, ಮೂವರು ಪುತ್ರರು, ಅಪಾರ ಸಂಖ್ಯೆಯ ಬಂಧುವರ್ಗ, ಮಿತ್ರರು ಹಾಗೂ ಆಪ್ತರನ್ನು ಅಗಲಿದ್ದು, ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ವೀರಶೈವ ರುದ್ರಭೂಮಿಯಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್