ಪ್ರಧಾನಿಗೆ ದೊರೆತ ಉಡುಗೊರೆಗಳ ಇ-ಹರಾಜಿನಲ್ಲಿ ರಾಜಸ್ಥಾನದ 37 ವಿಶಿಷ್ಟ ಕಲಾಕೃತಿಗಳು
ನವದೆಹಲಿ, 27 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಉಡುಗೊರೆಗಳ ವಾರ್ಷಿಕ ಇ-ಹರಾಜಿನ 8ನೇ ಆವೃತ್ತಿಯಲ್ಲಿ ರಾಜಸ್ಥಾನದ ಸಾಂಸ್ಕೃತಿಕ ವೈವಿಧ್ಯ, ರಾಜವೈಭವ, ಜನಪದ ನಂಬಿಕೆ ಹಾಗೂ ಸಾಂಪ್ರದಾಯಿಕ ಕರಕುಶಲ ಕಲೆಗಳ ಅನನ್ಯ ಪ್ರದರ್ಶನ ಕಂಡುಬರುತ್ತಿದೆ. ಕೇಂದ್ರ ಸಂಸ್ಕೃತಿ
वार्षिक ई-नीलामी के लिए उपहारों की एक झलक।


ನವದೆಹಲಿ, 27 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಉಡುಗೊರೆಗಳ ವಾರ್ಷಿಕ ಇ-ಹರಾಜಿನ 8ನೇ ಆವೃತ್ತಿಯಲ್ಲಿ ರಾಜಸ್ಥಾನದ ಸಾಂಸ್ಕೃತಿಕ ವೈವಿಧ್ಯ, ರಾಜವೈಭವ, ಜನಪದ ನಂಬಿಕೆ ಹಾಗೂ ಸಾಂಪ್ರದಾಯಿಕ ಕರಕುಶಲ ಕಲೆಗಳ ಅನನ್ಯ ಪ್ರದರ್ಶನ ಕಂಡುಬರುತ್ತಿದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಈ ಇ-ಹರಾಜಿನಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುವ ಒಟ್ಟು 37 ವಿಶಿಷ್ಟ ಕಲಾಕೃತಿಗಳನ್ನು ಸೇರಿಸಲಾಗಿದೆ. ಈ ಕಲಾಕೃತಿಗಳು ರಾಜ್ಯದ ಶತಮಾನಗಳ ಇತಿಹಾಸ ಹಾಗೂ ಜೀವಂತ ಸಾಂಪ್ರದಾಯಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.

ಸಂಗ್ರಹದ ಪ್ರಮುಖ ಆಕರ್ಷಣೆಗಳಲ್ಲಿ ರಾಜಸ್ಥಾನದ ಸಾಂಪ್ರದಾಯಿಕ ಮರದ ಕಲೆಯ ಅತ್ಯುತ್ತಮ ಮಾದರಿಗಳು ಸೇರಿವೆ. ಸಾಂಪ್ರದಾಯಿಕ ಕೆತ್ತನೆ ಹಾಗೂ ಸೂಕ್ಷ್ಮ ವಿನ್ಯಾಸಗಳಿಂದ ಅಲಂಕರಿಸಲಾದ, ಹೌದಾ ಹೊಂದಿರುವ ಕೈಯಿಂದ ಕೆತ್ತಿದ ಭವ್ಯ ಅಂಬಾಬಾರಿ ಆನೆ, ಸಾಂಪ್ರದಾಯಿಕ ಪರಿಚಾರಕರು ಹಾಗೂ ರಾಜಮನೆತನದ ಹೌದಾದೊಂದಿಗೆ ಅಲಂಕರಿಸಲಾದ ಮರದ ಆನೆಗಳ ಮೆರವಣಿಗೆಯ ದೃಶ್ಯಗಳು ಗಮನ ಸೆಳೆಯುತ್ತವೆ. ಪಿಚ್ವಾಯಿ ಹಾಗೂ ಫಡ್ ಚಿತ್ರಕಲೆಗಳಿಗೂ ಸ್ಥಾನ ನೀಡಲಾಗಿದೆ.

ರಾಜಸ್ಥಾನದ ವಿಶ್ವಪ್ರಸಿದ್ಧ ಚಿತ್ರಕಲಾ ಶೈಲಿಗಳಿಗೂ ಹರಾಜು ಪಟ್ಟಿಯಲ್ಲಿ ಪ್ರಮುಖ ಸ್ಥಾನ ದೊರೆತಿದೆ. ನಾಥದ್ವಾರದ ಪ್ರಸಿದ್ಧ ಕೃಷ್ಣಭಕ್ತಿ ಪರಂಪರೆಯನ್ನು ಬಿಂಬಿಸುವ ಶ್ರೀನಾಥಜಿಯ ಪವಿತ್ರ ಪಿಚ್ವಾಯಿ ಚಿತ್ರ, ಭಗವಾನ್ ಲಕ್ಷ್ಮೀ-ನಾರಾಯಣರ ಪ್ರಸಂಗಗಳನ್ನು ಚಿತ್ರಿಸಿರುವ ಸಾಂಪ್ರದಾಯಿಕ ಫಡ್ ಚಿತ್ರ ಹಾಗೂ ಶ್ರೀಕೃಷ್ಣನ ರಾಸಲೀಲೆಯನ್ನು ಬಿಂಬಿಸುವ ಪಟ್ಟಚಿತ್ರ ಶೈಲಿಯ ಕಲಾಕೃತಿಗಳು ಇದರಲ್ಲಿ ಸೇರಿವೆ.

ಜನರ ಧಾರ್ಮಿಕ ನಂಬಿಕೆಯ ಪ್ರಮುಖ ಕೇಂದ್ರಗಳು ಹಾಗೂ ಜನಪದ ದೇವತೆಗಳಿಗೆ ಸಂಬಂಧಿಸಿದ ಹಲವು ಕಲಾಕೃತಿಗಳೂ ಹರಾಜಿನಲ್ಲಿವೆ. ಜನಪದ ದೇವತೆ ತೇಜಾಜಿ ಮಹಾರಾಜರ ಕುದುರೆ ಮೇಲೆ ಕುಳಿತಿರುವ ಬೆಳ್ಳಿಯ ಸ್ಮರಣಿಕೆ, ಅವರ ಸಾಂಪ್ರದಾಯಿಕ ಭಾಲೆ ಮತ್ತು ಸರ್ಪದ ಸಂಕೇತಗಳೊಂದಿಗೆ ರೂಪಿಸಲಾಗಿದೆ. ಕರೌಲಿಯ ಕೈಲಾ ಮಾತೆ, ಜಾಲೋರ್‌ನ ಸುಂಧಾ ಮಾತೆ, ಬಾರ್ಮೇರ್‌ ಜಿಲ್ಲೆಯ ಬಾಯ್ತುವಿನ ಖೇಮಾ ಬಾಬಾ, ಪುಷ್ಕರದ ಜಗತ್ಪಿತ ಬ್ರಹ್ಮಾ ದೇವಸ್ಥಾನ, ಶ್ರೀ ಕಲ್ಯಾಣ್ ರಾಯ್‌ಜಿ ಮಹಾರಾಜ್ ಹಾಗೂ ಬನ್ಸ್‌ವಾರಾದ ಐತಿಹಾಸಿಕ ಮಾನಗಢ ಧಾಮದ ಚಿತ್ರಗಳೂ ಸೇರಿವೆ.

ಇದಲ್ಲದೆ, ಸಾಂಸ್ಕೃತಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಅಜ್ಮೇರ್ ಷರೀಫ್ ದರ್ಗಾದ ವಾಸ್ತುಶೈಲಿ ಹಾಗೂ ಸರ್ವಧರ್ಮ ಸಮಭಾವದ ಪರಂಪರೆಯನ್ನು ಬಿಂಬಿಸುವ ಕೈಯಿಂದ ರಚಿಸಲಾದ ಚೌಕಟ್ಟುಬದ್ಧ ಕಲಾಕೃತಿಯೂ ಹರಾಜಿನಲ್ಲಿದೆ.

ರಾಜಸ್ಥಾನದ ವಸ್ತ್ರ ಹಾಗೂ ಆಭರಣ ಪರಂಪರೆಯ ಭಾಗವಾಗಿ ರತ್ನಗಳು ಮತ್ತು ಗರಿಗಳಿಂದ ಅಲಂಕರಿಸಲಾದ ಸಾಂಪ್ರದಾಯಿಕ ಪೇಟ, ಬಹುವರ್ಣದ ವಿನ್ಯಾಸಗಳನ್ನು ಹೊಂದಿರುವ ಹಳದಿ ಪೇಟ ಹಾಗೂ ಗೋತಾ-ಕಿನಾರಿ ಅಲಂಕಾರ ಹೊಂದಿರುವ ಅಂಗವಸ್ತ್ರಗಳನ್ನು ಸೇರಿಸಲಾಗಿದೆ.

ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಪತ್ರಿಕೆಗಳ ಚೌಕಟ್ಟುಬದ್ಧ ಪ್ರತಿಗಳು ಹಾಗೂ ಸಮಕಾಲೀನ ಸ್ಮರಣಿಕೆಗಳೂ ಈ ಇ-ಹರಾಜಿನ ಭಾಗವಾಗಿವೆ.

ಸಚಿವಾಲಯದ ಪ್ರಕಾರ, ಪ್ರಧಾನಿ ಸ್ಮರಣಿಕೆಗಳ ಇ-ಹರಾಜಿನ 8ನೇ ಆವೃತ್ತಿ ಅಕ್ಟೋಬರ್ 2ರವರೆಗೆ ನಡೆಯಲಿದೆ. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕಲಾಕೃತಿಗಳ ಸಂಪೂರ್ಣ ಪಟ್ಟಿಯನ್ನು ವೀಕ್ಷಿಸಲು ಮತ್ತು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನಾಗರಿಕರು pmmementos.gov.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

ಇ-ಹರಾಜಿನಿಂದ ಸಂಗ್ರಹವಾಗುವ ಹಣವನ್ನು ಜನಕಲ್ಯಾಣ ಯೋಜನೆಗಳಿಗೆ ಬಳಸಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande