ನ್ಯೂಯಾರ್ಕ್ನಲ್ಲಿ ಕೆನಡಾ, ಮೆಕ್ಸಿಕೊ, ವೆನೆಜುವೆಲಾ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮಾತುಕತೆ
ನ್ಯೂಯಾರ್ಕ್, 27 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶನಿವಾರ ಸ್ಥಳೀಯ ಸಮಯದಲ್ಲಿ 81ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) ಸಂದರ್ಭದಲ್ಲಿ ಕೆನಡಾ, ಮೆಕ್ಸಿಕೊ ಹಾಗೂ ವೆನೆಜುವೆಲಾದ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ
मैक्सिको के विदेशमंत्री  रॉबर्टो वेलास्को अल्वारेज से मुलाकात के दौरान भारत के विदेशमंत्री जयशंकर। फोटो - @ जयशंकर


वेनेजुएला के विदेशमंत्री फेलिक्स प्लासेंसिया गोंजालेज के साथ संयुक्त राष्ट्र मुख्यालय में भारत के विदेशमंत्री जयशंकर। फोटो - @ जयशंकर


कनाडा की विदेशमंत्री अनीता आनंद के साथ भारत के विदेशमंत्री जयशंकर। फोटो - @ जयशंकर


ನ್ಯೂಯಾರ್ಕ್, 27 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶನಿವಾರ ಸ್ಥಳೀಯ ಸಮಯದಲ್ಲಿ 81ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) ಸಂದರ್ಭದಲ್ಲಿ ಕೆನಡಾ, ಮೆಕ್ಸಿಕೊ ಹಾಗೂ ವೆನೆಜುವೆಲಾದ ವಿದೇಶಾಂಗ ಸಚಿವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಜೈಶಂಕರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಭೇಟಿಗಳ ಮಾಹಿತಿಯನ್ನು ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ.

ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರನ್ನು ಭೇಟಿಯಾಗಿ ಅರ್ಥಪೂರ್ಣ ಚರ್ಚೆ ನಡೆಸಿರುವುದಾಗಿ ಜೈಶಂಕರ್ ತಿಳಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೆಕ್ಸಿಕೊದ ವಿದೇಶಾಂಗ ಸಚಿವ ರಾಬರ್ಟೊ ವೆಲಾಸ್ಕೊ ಅಲ್ವಾರೆಸ್ ಅವರೊಂದಿಗೂ ಜೈಶಂಕರ್ ಸಭೆ ನಡೆಸಿದರು. ಸಭೆಯ ವಿವರಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವೆನೆಜುವೆಲಾದ ವಿದೇಶಾಂಗ ಸಚಿವ ಫೆಲಿಕ್ಸ್ ಪ್ಲಾಸೆನ್ಸಿಯಾ ಗೊನ್ಜಾಲೆಸ್ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿರುವುದಾಗಿ ಜೈಶಂಕರ್ ತಿಳಿಸಿದ್ದಾರೆ. ಭಾರತ ಮತ್ತು ವೆನೆಜುವೆಲಾ ನಡುವಿನ ಇಂಧನ ಸಹಕಾರ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ. ದ್ವಿಪಕ್ಷೀಯ ಸಹಕಾರದ ಇತರ ಕ್ಷೇತ್ರಗಳ ಜೊತೆಗೆ ಇಂಧನ ಸಂಬಂಧಗಳ ಪ್ರಗತಿ ಹಾಗೂ ಪ್ರಸ್ತುತ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜೈಶಂಕರ್ ಅವರು 81ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಕೃತಕ ಬುದ್ಧಿಮತ್ತೆಯನ್ನು ಜಾಗತಿಕ ದಕ್ಷಿಣ ರಾಷ್ಟ್ರಗಳೊಂದಿಗಿನ ಭಾರತದ ಸಹಭಾಗಿತ್ವದ ಕಾರ್ಯಸೂಚಿಯ ಪ್ರಮುಖ ಭಾಗವಾಗಿ ಭಾರತ ಪರಿಗಣಿಸಿದೆ ಎಂದು ಅವರು ಹೇಳಿದ್ದರು.

ಕೃತಕ ಬುದ್ಧಿಮತ್ತೆ ಮಾನವ ಸಬಲೀಕರಣ, ಆರ್ಥಿಕ ಸಮೃದ್ಧಿ ಹಾಗೂ ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರದಲ್ಲಿ ಪರಿವರ್ತನಾತ್ಮಕ ಸಾಧನವಾಗಲಿದೆ ಎಂದು ಜೈಶಂಕರ್ ತಿಳಿಸಿದ್ದರು. ತಂತ್ರಜ್ಞಾನದ ಪ್ರಜಾಸತ್ತೀಕರಣ ಮತ್ತು ಸಾಂಸ್ಕೃತಿಕ ತಿಳುವಳಿಕೆಯ ಅಗತ್ಯಕ್ಕೂ ಅವರು ಒತ್ತು ನೀಡಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande