ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೊಡುಗೆ ಸದಾ ಸ್ಮರಣೀಯ: ಖರ್ಗೆ
ನವದೆಹಲಿ, 26 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ರಾಷ್ಟ್ರ ನಿರ್ಮಾಣದ ಅಸಾಧಾರಣ ಕೊಡುಗೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ. ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಆರ್ಥಿಕ ಸುಧಾರಣೆಗಳು ಭಾರತದ ಅಭಿವೃದ್ಧಿಯ ಪಥವನ್ನು ಪರಿವರ್ತಿಸಿ
ಖರ್ಗೆ ಎಕ್ಸ್ ಪೋಸ್ಟ್


ನವದೆಹಲಿ, 26 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ರಾಷ್ಟ್ರ ನಿರ್ಮಾಣದ ಅಸಾಧಾರಣ ಕೊಡುಗೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಆರ್ಥಿಕ ಸುಧಾರಣೆಗಳು ಭಾರತದ ಅಭಿವೃದ್ಧಿಯ ಪಥವನ್ನು ಪರಿವರ್ತಿಸಿದವು. ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಲಕ್ಷಾಂತರ ಜನರನ್ನು ಬಡತನದಿಂದ ಹೊರತರಲು ನೆರವಾದವು ಎಂದು ಖರ್ಗೆ ಎಕ್ಸನಲ್ಲಿ ಹೇಳಿದ್ದಾರೆ.

ಸರಳತೆ, ಪ್ರಾಮಾಣಿಕತೆ ಮತ್ತು ವಿವೇಕ ಅವರ ಸಾರ್ವಜನಿಕ ಜೀವನದ ಪ್ರಮುಖ ಲಕ್ಷಣಗಳಾಗಿದ್ದವು. ಶಾಂತ ಘನತೆ ಮತ್ತು ಕರುಣೆಯಿಂದ ಆಡಳಿತ ನಡೆಸಿದ ಅವರು, ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ರೂಪಿಸಿದ ಹಕ್ಕು ಆಧಾರಿತ ಆಡಳಿತ ವ್ಯವಸ್ಥೆ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಅವರ ಜನ್ಮದಿನದಂದು ಹೃದಯಪೂರ್ವಕ ಗೌರವ ಸಲ್ಲಿಸುವುದಾಗಿ ಖರ್ಗೆ ಹೇಳಿದ್ದಾರೆ.

ಪ್ರಾಮಾಣಿಕ ಸಾರ್ವಜನಿಕ ಸೇವೆ, ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಮತ್ತು ಪರಿವರ್ತನಾತ್ಮಕ ಆರ್ಥಿಕ ಸುಧಾರಣೆಗಳ ಮೂಲಕ ಮನಮೋಹನ್ ಸಿಂಗ್ ಅವರು ನಿರ್ಮಿಸಿದ ಪರಂಪರೆ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿದೆ ಎಂದು ಖರ್ಗೆ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande