ಜೂಜು ಅಡ್ಡೆ ಮೇಲೆ ಪೋಲಿಸರ ದಾಳಿ : ಪತ್ರಕರ್ತ ಸೇರಿ 23 ಜನರ ವಿರುದ್ಧ ಪ್ರಕರಣ
ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ರಾಜ್ಯಮಟ್ಟದ ಪತ್ರಿಕೆಯ ತಾಲೂಕು ಮಟ್ಟದ ಬಿಡಿ ವರದಿಗಾರರಾಗಿ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿರುವ ಪತ್ರಕರ್ತ ಕುರುಗೋಡು ಪಟ್ಟಣದ ಸರ್ವೇ ನಂ.675 ರ ಒಂದು ಎಕರೆ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಇಸ್ಪೀಟ್ ದಂಧೆ ನಡೆ
Case against 23 people including journalists


Case against 23 people including journalists


Case against 23 people including journalists


Case against 23 people including journalists


ಬಳ್ಳಾರಿ, 26 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ರಾಜ್ಯಮಟ್ಟದ ಪತ್ರಿಕೆಯ ತಾಲೂಕು ಮಟ್ಟದ ಬಿಡಿ ವರದಿಗಾರರಾಗಿ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿರುವ ಪತ್ರಕರ್ತ ಕುರುಗೋಡು ಪಟ್ಟಣದ ಸರ್ವೇ ನಂ.675 ರ ಒಂದು ಎಕರೆ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಇಸ್ಪೀಟ್ ದಂಧೆ ನಡೆಸುತ್ತಿರುವ ಕುರಿತು ಪತ್ರಕರ್ತ ಸೇರಿ 23 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಪ್ರಮುಖ ಆರೋಪಿ ಆಗಿರುವ ಪತ್ರಕರ್ತ ಕೆ.ವೀರಭದ್ರಗೌಡ ಅತ್ಯುತ್ತಮ ಬರಹಗಾರರು. ಸಿನಿಮಾ, ರಂಗಭೂಮಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರು. ಕುರುಗೋಡು - ಕಂಪ್ಲಿ ರಸ್ತೆಯಲ್ಲಿ ಇರುವ ಸರ್ಕಾರಿ ಭೂಮಿಯಲ್ಲಿ ಪುರಾತತ್ವ ಇಲಾಖೆಯ ಸ್ಮಾರಕಗಳ ರಕ್ಷಣೆಗೆ ಎಂದು ಶೆಡ್ ನಿರ್ಮಿಸಿ ಇಸ್ಪೀಟ್ ಆಟ ಆಡಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 10 .45 ಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಕರೆಮ್ಮ ಅವರ ನೇತೃತ್ವದಲ್ಲಿ ಇಸ್ಪೇಟ್ ಜೂಜಾಟದ ಕೇಂದ್ರದ ಮೇಲೆ ದಾಳಿ ನಡೆದಾಗ,

ಪೊಲೀಸರು ಇಸ್ಪೇಟ್ ಕಾರ್ಡ್ಗಳನ್ನು, ನಗದು 1.26 ಲಕ್ಷ ರೂ. ವಶಕ್ಕೆ ಪಡೆದಯುವುದು ಅಲ್ಲದೇ, ಪತ್ರಕರ್ತ ಕೆ. ವೀರಭದ್ರಗೌಡ, ಪಟ್ಟಣದ ಲೋಕೇಶ, ಅಂಜಿನಪ್ಪ, ನಾಗರಾಜ, ದೊಡ್ಡಬಸಪ್ಪ, ರಮೇಶ, ರಾಜೇಶ, ಪ್ರಶಾಂತ್, ನಾಗರಾಜ, ಯೋಗೇಶ, ಶರಣಬಸವ, ಹೊನ್ನೂರಸ್ವಾಮಿ, ಮೌಲಾ, ಇಮಾಮ್ ಹುಸೇನ್, ಶರಣಗೌಡ, ಕೃಷ್ಣ, ಚಂದ್ರು, ಎಫ್. ಸಾಂಬಲಿಂಗಪ್ಪ, ರವಿ, ನಾಗರಾಜ, ನಾಗೇಶ, ರಮೇಶ, ಎಸ್. ಗಾದಿಲಿಂಗಪ್ಪ, ರಾಘು, ಕರಿಬಸಪ್ಪ ಹಾಗೂ ಅಕ್ಬರ್ ಮತ್ತು ಸುತ್ತಲಿನ ಗ್ರಾಮಗಳ ಒಟ್ಟು 23 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande