ಅಹಂಕಾರವನ್ನು ತ್ಯಜಿಸಿ ಜ್ಞಾನದತ್ತ ಸಾಗುವುದೇ ಪರಿವರ್ತನೆ : ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಅಹಂಕಾರವನ್ನು ತ್ಯಜಿಸಿ ಜ್ಞಾನದತ್ತ ಸಾಗುವುದೇ ಪರಿವರ್ತನೆಯ ಪ್ರಮುಖ ಪ್ರಕ್ರಿಯೆ ಆಗಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ, ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಗಳ ಸಂಸ್ಥಾಪಕ ಮಹ
Transformation lies in shedding ego and moving towards knowledge


Transformation lies in shedding ego and moving towards knowledge


ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಅಹಂಕಾರವನ್ನು ತ್ಯಜಿಸಿ ಜ್ಞಾನದತ್ತ ಸಾಗುವುದೇ ಪರಿವರ್ತನೆಯ ಪ್ರಮುಖ ಪ್ರಕ್ರಿಯೆ ಆಗಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭೆ, ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಗಳ ಸಂಸ್ಥಾಪಕ ಮಹಾಗರು ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 159ನೇ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತ್ಯೋತ್ಸವು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಗುರುವಾರ ಬೆಳಗ್ಗೆ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ, `ಜೀವನ ದರ್ಶನ' ಪ್ರವಚನದಲ್ಲಿ ಆಶೀರ್ವಚನದಲ್ಲಿ ತಿಳಿಸಿದರು.

ಸಂತೋಷದಿಂದ ಇರುವವರೇ ಸಂತರು. ಅಸಂತೋಷಿಗಳೇ ಸಂಸಾರಿಗಳು. ಅನರ್ಥಗಳ ಮೂಲವೇ ದ್ವೇಷ. ದ್ವೇಷ, ಅಸೂಯೆ ಮತ್ತು ಪ್ರತೀಕಾರ ಮನಸ್ಥಿತಿಯನ್ನು ಮೀರಿ, ತಪ್ಪು ತಿಳುವಳಿಕೆಗಳನ್ನು ದಾಟಿ, ಸಮಸ್ಯೆಗಳ ಮೂಲವನ್ನು ಅರ್ಥ ಮಾಡಿಕೊಂಡು ಜೀವಿಸುವುದೇ ಜ್ಞಾನ ಮತ್ತು ಜೀವನ ದರ್ಶನದ ತಿರುಳಾಗಿದೆ ಎಂದರು.

ದರೂರಿನ ಶ್ರೀಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮಿಗಳು, ಕುರುಗೋಡು ಮತ್ತು ಗರಗ ನಾಗಲಾಪುರದ ವಿರಕ್ತಮಠದ ನಿರಂಜನಪ್ರಭು ಸ್ವಾಮಿಗಳು, ಸೋಮಸಮುದ್ರ ವಿರಕ್ತಮಠದ ಸಿದ್ದಲಿಂಗಸ್ವಾಮಿಗಳು, ಬೂದುಗುಂಪದ ವಿರುಕ್ತಮಠದ ಸಿದ್ದೇಶ್ವರ ಸ್ವಾಮಿಗಳು ಮತ್ತು ಶ್ರೀಧರಗಡ್ಡೆಯ ವಿರಕ್ತಮಠದ ಮರಿಕೊಟ್ಟೂರು ದೇಶೀಕರು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು.

ಖ್ಯಾತ ಪ್ರವಚನಕಾರಾದ ಹರ್ಲಾಪುರದ ಹರ್ತಿಮಠ ಸಂಸ್ಥಾನದ ವೇದಮೂರ್ತಿ ಸದಾನಂದ ಶಾಸ್ತ್ರಿಗಳು `ಜೀವನ ದರ್ಶನ' ಪ್ರವಚನ ನಡೆಸಿದ್ದು,

ಬಿಳೇಬಾಳದ ಶಿವಲಿಂಗಯ್ಯ ಗವಾಯಿಗಳು ಸಂಗೀತ ಮತ್ತು ಹೊಳಲು ಗ್ರಾಮದ ಸಿದ್ದಲಿಂಗೇಶ ಅವರು ತಬಲಾ ಸಾಥ್ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande