ಬಿಜೆಪಿಯಲ್ಲಿ ಮಹತ್ವದ ಸಂಘಟನಾ ಬದಲಾವಣೆ; 24 ನಾಯಕರಿಗೆ ಹೊಸ ಜವಾಬ್ದಾರಿ
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ವಿವಿಧ ರಾಜ್ಯಗಳ ನಾಯಕರಿಗೆ ಹೊಸ ಸಂಘಟನಾ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಎಲ್ಲ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
सूची का दूसरा पन्ना


सूची की कॉपी


भाजपा द्वारा जारी सूची


ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ವಿವಿಧ ರಾಜ್ಯಗಳ ನಾಯಕರಿಗೆ ಹೊಸ ಸಂಘಟನಾ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಎಲ್ಲ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.

ಬಿಜೆಪಿ ಕೇಂದ್ರ ಕಚೇರಿ ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ ಒಟ್ಟು 24 ನಾಯಕರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ), ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ), ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸೇರಿದಂತೆ ಸಂಘಟನೆಯ ವಿವಿಧ ಪ್ರಮುಖ ಹೊಣೆಗಾರಿಕೆಗಳನ್ನು ಹಂಚಿಕೆ ಮಾಡಲಾಗಿದೆ.

ಶಿವಪ್ರಕಾಶ್ ಅವರಿಗೆ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿ ನೀಡಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಗೋವಾ ರಾಜ್ಯಗಳ ಹೊಣೆಗಾರಿಕೆ ವಹಿಸಲಾಗಿದೆ. ಸೌದಾನ್ ಸಿಂಗ್ ಅವರಿಗೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಜವಾಬ್ದಾರಿ ನೀಡಲಾಗಿದೆ.

ಬಿ. ಸತೀಶ್ ಅವರಿಗೆ ಪರಿಶಿಷ್ಟ ಜಾತಿ-ಪಂಗಡಗಳ ಮೋರ್ಚಾ ಹಾಗೂ ಸಂಸದೀಯ ಕಚೇರಿಯ ಜವಾಬ್ದಾರಿ ನೀಡಲಾಗಿದೆ. ನಾಗೇಂದ್ರ ಅವರಿಗೆ ಸಂಘಟನೆ ಮತ್ತು ಹಿರಿಯ ಕಾರ್ಯಕರ್ತರ ಸಂಪರ್ಕದ ಹೊಣೆ ವಹಿಸಲಾಗಿದೆ. ಅಜಯ್ ಜಾಮ್ವಾಲ್ ಅವರನ್ನು ಮಹಾರಾಷ್ಟ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)ಯಾಗಿ ನೇಮಿಸಲಾಗಿದೆ.

ಸತೀಶ್ ಧೋಂಡ್ ಅವರಿಗೆ ಮಹಾರಾಷ್ಟ್ರದ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿ ನೀಡುವುದರ ಜತೆಗೆ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಬುಡಕಟ್ಟು ಸಮುದಾಯದ ಸಂಪರ್ಕದ ಹೊಣೆಗಾರಿಕೆ ನೀಡಲಾಗಿದೆ.

ಮಧುಕರ್ ಅವರಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ, ದಶರಥ್ ಅವರಿಗೆ ತೆಲಂಗಾಣ ಹಾಗೂ ರವೀಂದ್ರ ರಾಜು ಅವರಿಗೆ ಅಸ್ಸಾಂ ಮತ್ತು ತ್ರಿಪುರದ ಜತೆಗೆ ಕಚೇರಿ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ.

ಭೀಮಾಬಾಯಿ ದಲ್ಸಾನಿಯಾ ಅವರನ್ನು ಬಿಹಾರ, ಪವನ್ ಸಾಯಿ ಅವರನ್ನು ಜಾರ್ಖಂಡ್ ಹಾಗೂ ಸಿದ್ಧಾರ್ಥನ್ ಅವರನ್ನು ಹಿಮಾಚಲ ಪ್ರದೇಶದ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)ಯಾಗಿ ನೇಮಿಸಲಾಗಿದೆ.

ರತ್ನಾಕರ್ ಅವರಿಗೆ ಗುಜರಾತ್, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್-ದಿಯು; ಅರುಣ್ ಬಿನ್ವಾಡಿ ಅವರಿಗೆ ಗುಜರಾತ್; ಫಣೀಂದ್ರನಾಥ್ ಶರ್ಮಾ ಅವರಿಗೆ ಉತ್ತರಾಖಂಡ; ಪವನ್ ರಾಣಾ ಅವರಿಗೆ ದೆಹಲಿ ಮತ್ತು ಹರಿಯಾಣ; ಕರ್ಮವೀರ್ ಅವರಿಗೆ ಛತ್ತೀಸ್‌ಗಢ ಹಾಗೂ ಚಂದ್ರಶೇಖರ್ ಅವರಿಗೆ ಮಧ್ಯಪ್ರದೇಶದ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿ ವಹಿಸಲಾಗಿದೆ.

ಮಾನಸ್ ಮೊಹಂತಿ ಅವರಿಗೆ ಒಡಿಶಾ, ಮಂತ್ರಿ ಶ್ರೀನಿವಾಸುಲು ಅವರಿಗೆ ಪಂಜಾಬ್ ಮತ್ತು ಚಂಡೀಗಢ, ಧರ್ಮಪಾಲ್ ಅವರಿಗೆ ಉತ್ತರ ಪ್ರದೇಶ ಹಾಗೂ ಅಮಿತಾಭ್ ಚಕ್ರವರ್ತಿ ಅವರಿಗೆ ಪಶ್ಚಿಮ ಬಂಗಾಳದ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿ ನೀಡಲಾಗಿದೆ.

ಸಂಘಟನಾ ಮಟ್ಟದಲ್ಲಿ ಅಭಯ್ ಗಿರಿ ಅವರನ್ನು ಬ್ರಜ್ ಪ್ರದೇಶದ ಸಂಘಟಕರಾಗಿ ಹಾಗೂ ಅನಂತ ನಾರಾಯಣ ಮಿಶ್ರಾ ಅವರನ್ನು ಭಾಗಲ್ಪುರ, ಪೂರ್ಣಿಯಾ ಮತ್ತು ಕೋಸಿ ಪ್ರದೇಶಗಳ ಸಂಘಟಕರಾಗಿ ನೇಮಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande