ನಾಳೆ ದೇಶಾದ್ಯಂತ ನಮಾಮಿ ಭಾರತಮ್ ಅಭಿಯಾನ
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:‘ವಂದೇ ಮಾತರಮ್’ ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ನವದೆಹಲಿಯ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನವು ಸೆಪ್ಟೆಂಬರ್ 25ರಂದು ದೇಶಾದ್ಯಂತ ‘ನಮಾಮಿ ಭಾರತಮ್’ ಕಾರ್ಯಕ್ರಮವನ್ನು ಆಯೋಜಿಸಿದೆ. ದೇಶದ 25 ಸಾವಿರಕ್ಕೂ ಅಧಿಕ ಸ್ಥಳಗಳಲ್ಲ
ನಮಾಮಿ ಭಾರತಮ್ ಅಭಿಯಾನ ಲೋಗೋ


ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:‘ವಂದೇ ಮಾತರಮ್’ ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ನವದೆಹಲಿಯ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನವು ಸೆಪ್ಟೆಂಬರ್ 25ರಂದು ದೇಶಾದ್ಯಂತ ‘ನಮಾಮಿ ಭಾರತಮ್’ ಕಾರ್ಯಕ್ರಮವನ್ನು ಆಯೋಜಿಸಿದೆ.

ದೇಶದ 25 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ನಾಗರಿಕರು ಒಂದೆಡೆ ಸೇರಿ ಸಂಪೂರ್ಣ ‘ವಂದೇ ಮಾತರಮ್’ ಗೀತೆಯನ್ನು ಸಾಮೂಹಿಕವಾಗಿ ಹಾಡಲಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ “ಒಂದು ಧ್ವನಿ–ಒಂದು ಸಂಕಲ್ಪ–ಒಂದು ಭಾರತ” ಎಂಬ ಸ್ಫೂರ್ತಿಯೊಂದಿಗೆ ದೇಶದ ವಿವಿಧೆಡೆಯಿಂದ ಭಾಗವಹಿಸುವವರು ಗೀತೆಯನ್ನು ಹಾಡಲಿದ್ದಾರೆ.

‘ನಮಾಮಿ ಭಾರತಮ್’ ಕೇವಲ ಸಾಮೂಹಿಕ ಗಾಯನ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ. ಕಿರಿಯ ಪೀಳಿಗೆಯನ್ನು ‘ವಂದೇ ಮಾತರಮ್’ನ ಐತಿಹಾಸಿಕ ಪಯಣ, ಸ್ವಾತಂತ್ರ್ಯ ಹೋರಾಟಕ್ಕೆ ಅದರ ಕೊಡುಗೆ ಹಾಗೂ ರಾಷ್ಟ್ರೀಯ ಸಾರ್ವಜನಿಕ ಜೀವನದಲ್ಲಿ ಅದರ ಮಹತ್ವದೊಂದಿಗೆ ಬೆಸೆಯುವ ದೇಶವ್ಯಾಪಿ ಅಭಿಯಾನವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಭಿಯಾನದ ಅಂಗವಾಗಿ ಶಾಲೆಗಳಲ್ಲಿ ಸಂವಾದ, ಸಮ್ಮೇಳನ, ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ‘ವಂದೇ ಮಾತರಮ್’ನ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರವನ್ನು ಪರಿಚಯಿಸುವ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸುವಲ್ಲಿ ‘ವಂದೇ ಮಾತರಮ್’ ಪ್ರಮುಖ ಪಾತ್ರ ವಹಿಸಿತ್ತು ಎಂದು ಆಯೋಜಕರು ಹೇಳಿದ್ದಾರೆ.

‘ನಮಾಮಿ ಭಾರತಮ್’ ಮೂಲಕ ‘ವಂದೇ ಮಾತರಮ್’ನ 150 ವರ್ಷಗಳ ಐತಿಹಾಸಿಕ ಪಯಣ ಹಾಗೂ ರಾಷ್ಟ್ರಕ್ಕೆ ಅದರ ಕೊಡುಗೆಯನ್ನು ದೇಶಾದ್ಯಂತ ಸ್ಮರಿಸಲಾಗುತ್ತಿದೆ.

ಏಕಕಾಲದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ‘ವಂದೇ ಮಾತರಮ್’ ಗೀತೆಯನ್ನು ಸಾಮೂಹಿಕವಾಗಿ ಹಾಡಲಿರುವ ಹಿನ್ನೆಲೆಯಲ್ಲಿ ಈ ದೇಶವ್ಯಾಪಿ ಅಭಿಯಾನವನ್ನು ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ದಾಖಲೆಗಾಗಿ ನಾಮನಿರ್ದೇಶನ ಮಾಡಲಾಗಿದೆ.

ವಿದ್ಯಾಭಾರತಿ ದೆಹಲಿ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ. ಸತೀಶ್ ಮಹೇಶ್ವರಿ ಅವರ ಪ್ರಕಾರ, ದೆಹಲಿಯ ಸುಮಾರು 300 ಸ್ಥಳಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ನಾಗರಿಕರು ‘ನಮಾಮಿ ಭಾರತಮ್’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸ್ಮೃತಿಗಳನ್ನು ಕಿರಿಯ ಪೀಳಿಗೆಗೆ ತಲುಪಿಸುವುದು, ಭಾರತೀಯ ಸಂಸ್ಕೃತಿಯೊಂದಿಗಿನ ಅವರ ನಂಟನ್ನು ಗಟ್ಟಿಗೊಳಿಸುವುದು ಹಾಗೂ ರಾಷ್ಟ್ರೀಯ ಐಕ್ಯತೆಯ ಭಾವನೆಯನ್ನು ಮತ್ತಷ್ಟು ಆಳವಾಗಿಸುವ ನಿಟ್ಟಿನಲ್ಲಿ ಈ ರಾಷ್ಟ್ರವ್ಯಾಪಿ ಅಭಿಯಾನ ಮಹತ್ವದ ಅವಕಾಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande