ಇಪಿಎಫ್ಒ ಶಾಸನಬದ್ಧ ವೇತನ ಮಿತಿ 25,000ಕ್ಕೆ ಹೆಚ್ಚಳ:
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಕಡ್ಡಾಯ ವ್ಯಾಪ್ತಿಗೆ ಒಳಪಡುವ ಶಾಸನಬದ್ಧ ಮಾಸಿಕ ವೇತನ ಮಿತಿಯನ್ನು ಪ್ರಸ್ತುತ ಇರುವ 15,000/- ದಿಂದ 25,000/-ಕ್ಕೆ ಹೆಚ್ಚಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಪರಿಷ್ಕೃತ ಆದ
ಇಪಿಎಫ್ಒ ಶಾಸನಬದ್ಧ ವೇತನ ಮಿತಿ 25,000ಕ್ಕೆ ಹೆಚ್ಚಳ:


ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಕಡ್ಡಾಯ ವ್ಯಾಪ್ತಿಗೆ ಒಳಪಡುವ ಶಾಸನಬದ್ಧ ಮಾಸಿಕ ವೇತನ ಮಿತಿಯನ್ನು ಪ್ರಸ್ತುತ ಇರುವ 15,000/- ದಿಂದ 25,000/-ಕ್ಕೆ ಹೆಚ್ಚಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಪರಿಷ್ಕೃತ ಆದೇಶವು ದಿನಾಂಕ 17 ಸೆಪ್ಟೆಂಬರ್ 2026ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ ಎಂದು ಬಳ್ಳಾರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಕೆ. ವಿ. ಪ್ರವೀಣ್ ತಿಳಿಸಿದ್ದಾರೆ.

ಸಾಮಾಜಿಕ ಭದ್ರತಾ ಸಂಹಿತೆ, 2020ರ ಅಧ್ಯಾಯ 3ರ ಅಡಿಯಲ್ಲಿ ಈ ತಿದ್ದುಪಡಿ ತರಲಾಗಿದ್ದು, ಇದರಿಂದಾಗಿ ಅಸಂಘಟಿತ ಮತ್ತು ಸಂಘಟಿತ ವಲಯದ ಲಕ್ಷಾಂತರ ನೌಕರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ವೇತನ ಮಿತಿ ಹೆಚ್ಚಳದಿಂದಾಗಿ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳು ನೌಕರರಿಗೆ ಲಭ್ಯವಾಗಲಿವೆ. ಅವುಗಳಲ್ಲಿ ನೌಕರರ ಭವಿಷ್ಯ ನಿಧಿ ಯೋಜನೆ-2026, ನೌಕರರ ಪಿಂಚಣಿ ಯೋಜನೆ-2026, ನೌಕರರ ಠೇವಣಿ ಆಧಾರಿತ ವಿಮಾ ಯೋಜನೆ-2026.

ಈ ನಿರ್ಧಾರವು ಉದ್ಯೋಗದಾತರು ಹಾಗೂ ನೌಕರರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ನೌಕರರಿಗೆ ನಿವೃತ್ತಿ ಭದ್ರತೆ, ಪಿಂಚಣಿ ಹಾಗೂ ವಿಮಾ ಸೌಲಭ್ಯಗಳನ್ನು ವಿಸ್ತರಿಸಲಿದೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande