ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುತ್ತವೆ
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುತ್ತವೆ ಎಂದು ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಜಯಪ್ರಕಾಶ್ ಜೆ. ಗುಪ್ತ ಅವರು ತಿಳಿಸಿದ್ದಾರೆ. ಆರ್ಎಸ್ಬಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ಅವರ ಸಂಯ
ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಕಟಿಸುತ್ತವೆ


ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುತ್ತವೆ ಎಂದು ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಜಯಪ್ರಕಾಶ್ ಜೆ. ಗುಪ್ತ ಅವರು ತಿಳಿಸಿದ್ದಾರೆ.

ಆರ್ಎಸ್ಬಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ 4ನೇ ಆವೃತ್ತಿಯ ಅಂತರಶಾಲಾ ಸಾಮಾನ್ಯ ಜ್ಞಾನ ಸ್ಪರ್ಧೆಯ ವಿಜೇತರ ಘೋಷಣೆ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಆರ್ಎಸ್ಬಿ ಚಾರಿಟೇಬಲ್ ಟ್ರಸ್ಟ್ ಪೆÇೀಲಾ ರಾಧಾಕೃಷ್ಣ ಅವರು, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತ ಆಗದೇ ಸುತ್ತಮುತ್ತಲಿನ ಪ್ರಪಂಚದ ಕುರಿತು ತಿಳಿದುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ವಾಸವಿ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ವೀರೇಶ್.ಯು, ಟ್ರಸ್ಟ್ನ ಅಧ್ಯಕ್ಷರಾದ ವಿಠ್ಠ ಕೃಷ್ಣಕುಮಾರ್, ಕಾರ್ಯದರ್ಶಿಗಳಾದ ಪಿ. ಎನ್. ಸುರೇಶ್, ರಾಮದುಗರ್ಂ ಸುರೇಶ್ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿನಿ ಸಿ. ಸಿಂಚನ ಮತ್ತು ಅನನ್ಯ ಅವರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿ ಶ್ರೀಮತಿ ಜಬೀನಾ ಬೇಗಂ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರದರ್ಶಿಸುತ್ತವೆ

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande