ಕಸ ಸಾಗಾಣಿಕೆ ಗುತ್ತಿಗೆಯಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಕಸ ಸಾಗಾಣಿಕೆ ಟೆಂಡರ್ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಕಸ ಸಾಗಾಣಿಕೆ ಗುತ್ತಿಗೆಯಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು


ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಕಂಪನಿಯ ಕಸ ಸಾಗಾಣಿಕೆ ಟೆಂಡರ್ಗಳಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಐಎಎಸ್ ಅಧಿಕಾರಿ ಕರಿಗೌಡ ಸೇರಿದಂತೆ ಕಸ ವಿಲೇವಾರಿ ಸಂಸ್ಥೆಯ ಪ್ರಮುಖರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ಸಲ್ಲಿಕೆಯಾಗಿದೆ.

ಟೆಂಡರ್, ಗುತ್ತಿಗೆ, ಭದ್ರತಾ ಠೇವಣಿ ಹಾಗೂ ಕಾರ್ಯಾದೇಶದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಒಂದು ವಾರದೊಳಗೆ ವರದಿ ನೀಡುವಂತೆ ಜಿಬಿಎ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಪ್ಯಾಕೇಜ್ 1, 2 ಮತ್ತು 5ರ ಟೆಂಡರ್ಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದ್ದು, ಪ್ಯಾಕೇಜ್ 2 ಮತ್ತು 5ರ ಗುತ್ತಿಗೆಯನ್ನು ಮುನಿಯಪ್ಪ ಎಂಟರ್ಪ್ರೈಸಸ್ಗೆ ನೀಡಲಾಗಿತ್ತು. ಟೆಂಡರ್ ನಿಯಮಗಳು ಹಾಗೂ ಭದ್ರತಾ ಠೇವಣಿ ವಿಚಾರದಲ್ಲಿ ವಿನಾಯಿತಿ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಪ್ಯಾಕೇಜ್ 2 ಮತ್ತು 5ರಲ್ಲಿ ಎಸ್ಟಿಎಸ್ (ಸೆಕೆಂಡರಿ ಟ್ರಾನ್ಸ್ಫರ್ ಸ್ಟೇಷನ್) ಸ್ಥಾಪನೆಗೆ ಕರೆದಿದ್ದ ಟೆಂಡರ್ನಲ್ಲಿ ಮುನಿಯಪ್ಪ ಎಂಟರ್ಪ್ರೈಸಸ್ ಭಾಗವಹಿಸಿತ್ತು. ನಿಗದಿತ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಸಂಸ್ಥೆ ಬಿಡ್ ಸಲ್ಲಿಸಿತ್ತು ಎನ್ನಲಾಗಿದೆ. ಪ್ಯಾಕೇಜ್ 2ರ ಟೆಂಡರ್ ಮೊತ್ತ ₹53.4 ಕೋಟಿ ಇದ್ದರೂ ₹33.63 ಕೋಟಿಗೆ ಗುತ್ತಿಗೆ ನೀಡಲಾಗಿದೆ.

ಪ್ಯಾಕೇಜ್ 5ರ ಟೆಂಡರ್ ಮೊತ್ತ ₹55.4 ಕೋಟಿ ಇದ್ದರೆ, ₹38.42 ಕೋಟಿಗೆ ಗುತ್ತಿಗೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಇದಲ್ಲದೆ, ಸುಮಾರು ₹150 ಕೋಟಿ ಮೊತ್ತದ ಸ್ವಚ್ಛ ಭಾರತ ನಿಧಿಯ ದುರ್ಬಳಕೆಯಾಗಿದೆ ಎಂಬ ಆರೋಪವೂ ದೂರಿನಲ್ಲಿ ಮಾಡಲಾಗಿದೆ.

ದೂರುದಾರರ ಆರೋಪ: ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ದಿಷ್ಟ ಸಂಸ್ಥೆಗೆ ಅನುಕೂಲ ಮಾಡಿಕೊಡಲಾಗಿದೆ.

ಟೆಂಡರ್ ಮೊತ್ತ, ಭದ್ರತಾ ಠೇವಣಿ ಮತ್ತು ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಇಡಿಗೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande