ಕೋಲಾರದಲ್ಲಿ ಹಿರಿಯ ನಾಗರಿಕರ ಕ್ರೀಡಾ ಕೂಟ
ಕೋಲಾರದಲ್ಲಿ ಹಿರಿಯ ನಾಗರಿಕರ ಕ್ರೀಡಾ ಕೂಟ
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಭು ಎನ್ ಬಡಿಗೇರ ರವರು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.


ಕೋಲಾರ: 23 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್ : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾ ಭವನದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

೨೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಜಿಲ್ಲೆಯ ಹಿರಿಯ ನಾಗರಿಕರು ಉತ್ಸಾಹದಿಂದ ಕ್ರೀಡಾ ಕೂಟದಲ್ಲಿ ಭಾಗವಹಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನೆದರು. ಸದಾ ಒಂದಿಲ್ಲೊAದು ಮಾನಸಿಕ ಒತ್ತಡ ಹಾಗೂ ಕಡೆಗಣನೆಯಿಂದ ಸಾಕಷ್ಟು ನೊಂದಿದ್ದ ಹಿರಿಯರು ಕ್ರೀಡಾ ಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ವಿಶೇಷವಾಗಿತ್ತು. ಕೆಲವರು ತಮ್ಮ ಮಕ್ಕಳು ಮೊಮ್ಮಕ್ಕೊಳೊಂದಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಿದರೆ, ಕೆಲವರು ಏಕಾಂಗಿಯಾಗಿ ಕ್ರೀಡಾ ಕೂಟಕ್ಕೆ ಆಗಮಿಸಿದ್ದರು. ಬಹುತೇಕರು ವೃದ್ಧಾಶ್ರಮಗಳಿಂದ ಆಗಮಿಸಿದ್ದರು.

ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಭು ಎನ್ ಬಡಿಗೇರ, ಆಧುನಿಕ ಜೀವನ ಪದ್ಧ್ದತಿ, ತಲೆಮಾರುಗಳ ನಡುವಿನ ವ್ಯತ್ಯಾಸದಿಂದ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯ ಹದಗೆಡುತ್ತಿದೆ. ಜೀವನದ ಸಂಧ್ಯಾಕಾಲದಲ್ಲಿ ಹಿರಿಯ ನಾಗರಿಕರು ಒಂಟಿತನ, ಮಾನಸಿಕ ಒತ್ತಡ, ಆರ್ಥಿಕ ಮುಗ್ಗಟ್ಟು ಅನಾರೋಗ್ಯ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರಿಗೆ ಮಾನಸಿಕ ಚೈತನ್ಯ ನೀಡಲು ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಹಿರಿಯ ನಾಗರಿಕರ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ ಮಾತನಾಡಿ, ಹಿರಿಯ ಜೀವಿಗಳಿಗೆ ಯಾವುದೇ ಸಮಸ್ಯೆವಿದ್ದರೂ ಪ್ರಜಾಸೇವಾ ಆಂದೋಲನದಲ್ಲಿ ಭಾಗವಹಿಸಿ ಸಂಬಂಧಪಟ್ಟ ಇಲಾಖೆಗಳಿಂದ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ನಿಮಗಾಗಿ ಅಧಿಕಾರಿಗಳು ನಿಮ್ಮ ಮನೆ ಬಾಗಲಿಗೆ ಬರುತ್ತಿದ್ದಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಆಧುನಿಕ ತಂತ್ರಜ್ಞಾನದಲ್ಲಿ ಮನೆಯಲ್ಲಿಯೇ ಮನೋರಂಜನೆ ಲಭಿಸುತ್ತಿದ್ದು, ನಿಮ್ಮ ಮನ ಉಲ್ಲಾಸಕ್ಕಾಗಿ ಕುಟುಂಬದಲ್ಲಿ ಬೆರೆತು ಉತ್ತಮ ಚಿತ್ರಗಳನ್ನು ವೀಕ್ಷಣೆ ಮಾಡಬಹುದು. ಕ್ರೀಡೆಗಳಲ್ಲಿ ಭಾಗವಹಿಸಿ ನಿಮ್ಮ ಆರೋಗ್ಯವನ್ನು ಸದೃಢ ಮಾಡಿಕೊಳ್ಳುವ ಜೊತೆಗೆ ಆಯಸ್ಸನ್ನು ಹೆಚ್ಚಿಸಿಕೊಳ್ಳಿ ಎಂದು ನುಡಿದರು.

೧೯೯೧ರಿಂದ ಅಕ್ಟೋಬರ್ ೦೧ನ್ನು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಹಿರಿಯ ನಾಗರಿಕರಲ್ಲಿ ಆತ್ಮಸ್ಥೆöÊರ್ಯ ಪ್ರೋತ್ಸಾಹ ನೀಡುವ ಸಲುವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

೧೦೦ ಮೀಟರ್ ಓಟ, ೧೦೦, ೨೦೦, ೪೦೦, ೮೦೦ ಮೀಟರ್ ನಡಿಗೆ, ಶಾಟ್ಪುಟ್ (೩ ಕೆ.ಜಿ), ಥ್ರೋಯಿಂಗ್ ಕ್ರಿಕೆಟ್ ಬಾಲ್, ೩ ರಿಂದ ೫ ನಿಮಿಷದವರೆಗೆ ನೀತಿ ಕತೆಗಳನ್ನು ಹೇಳುವುದು, ಜಾನಪದ ಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ೨೦೦ಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಂಜುಳ, ಸಿಬ್ಬಂದಿ ವರ್ಗ ಹಾಗೂ ಹಿರಿಯ ನಾಗರಿಕರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande