ಪ್ರೀತಿರಹಿತ ಅನುವಾದ ಯಾಂತ್ರಿಕ: ಹಿರಿಯ ವಿಮರ್ಶಕರಾದ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಮತ
ಪ್ರೀತಿರಹಿತ ಅನುವಾದ ಯಾಂತ್ರಿಕ: ಹಿರಿಯ ವಿಮರ್ಶಕರಾದ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಮತ
ಪ್ರೊ.ಸಿ.ಎನ್.ರಾಮಚಂದ್ರನ್


ಕೋಲಾರ, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಬೆಂಗಳೂರಿನ

ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ಅನುವಾದ: ಹೊಸ ಸಾಧ್ಯತೆಗಳು’ ಎಂಬ

ವಿಷಯದ ಕುರಿತಾದ ಒಂದು ವಾರದ ರಾಷ್ಟ್ರಮಟ್ಟದ ಆನ್ಲೈನ್ ಕಾರ್ಯಾಗಾರದಲ್ಲಿ ವಿಶ್ವವಿದ್ಯಾಲಯದ ಜಯಂತಿಯನ್ ಎಕ್ಸಟೆನ್ಷನ್ ಸರ್ವೀಸಸ್ ವಿಭಾಗದ ನಿರ್ದೇಶಕರಾದ ರೆ.ಫಾ.ಅನೂಪ್

ಕುರಿಯನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ತುಂಬಾ ಸಮೃದ್ಧವಾಗಿದೆ. ಮಾತೃಭಾಷೆ-ನೆಲ-ಸಂಸ್ಕೃತಿಯನ್ನು ಕುರಿತು ನಾವೆಲ್ಲರೂ ಸದಾ ಹೆಮ್ಮೆಯಿಂದ ನಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.

ಕಾರ್ಯಾಗಾರವನ್ನು

ಉದ್ಘಾಟಿಸಿ ಮಾತನಾಡಿದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರು, “ಅನುವಾದಕರು ಮೂಲ ಕೃತಿಯನ್ನು ಪ್ರೀತಿಸದೆ ಅನುವಾದ ಮಾಡಿದರೆ ಅದು ಯಾಂತ್ರಿಕ ಹಾಗೂ ಅಸಂತೋಷದಾಯಕವಾಗಿರುತ್ತದೆ” ಎಂದು

ಹಿರಿಯ ಅಭಿಪ್ರಾಯಪಟ್ಟರು.

ಅನುವಾದವು

ಮೂಲದಂತೆಯೇ ಯಶಸ್ವಿಯಾಗಿ ಆಗಬೇಕಾದರೆ ಅನುವಾದಕರು ಮೂಲ ಕೃತಿಯನ್ನು ಪ್ರೀತಿಸಬೇಕು. ಆ ತವಕ ಇದ್ದಾಗ

ಮಾತ್ರ ಅನುವಾದವು ಮೂಲದಂತೆಯೇ ನಮ್ಮ ಸಂತೋಷವನ್ನೂ ಜ್ಞಾನವನ್ನೂ ಹೆಚ್ಚಿಸುತ್ತದೆ.ಇತ್ತೀಚೆಗೆ

ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳಿಂದ ಮಾಡಲಾಗುತ್ತಿರುವ ಅನುವಾದಗಳು ಸರಿಯಾದುವಲ್ಲ. ಯಂತ್ರಗಳಿಂದ ಮಾಡುವ ಅನುವಾದಗಳು ಯಾಂತ್ರಿಕವೇ ಆಗಿರುತ್ತವೆ. ಅವು ಎಂದೂ ಭಾವಾನಾತ್ಮಕವಾಗುವುದಿಲ್ಲ. ಅನುವಾದವು ಭಾವಾನಾತ್ಮಕವಾಗಿ ಆಗದಿದ್ದರೆ ಸಾಹಿತ್ಯ ಆಗುವುದಿಲ್ಲ. ಎಂದಿಗೂ ಯಾಂತ್ರಿಕ ಅನುವಾದಗಳು ಮಾನವೀಯ ಕಾರ್ಯಕ್ಕಿಂತ ಮಿಗಿಲಾದ ಸಾಧನೆಯನ್ನು ಮಾಡಲು ಅಸಾಧ್ಯ ಎಂದು ತಿಳಿಸಿದರು.

ಯಾವುದೇ

ಭಾಷೆ ಮತ್ತು ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅನುವಾದ ಮಹತ್ವದ ಪ್ರಕ್ರಿಯೆಯಾಗಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆದಿರುವ ಅನುವಾದ ಪ್ರಕ್ರಿಯೆಯಿಂದ ಸ್ಥಳೀಯ ಭಾಷೆ-ಸಾಹಿತ್ಯಗಳು ಶ್ರೀಮಂತಗೊಂಡಿವೆ. ಯಾವ ಭಾಷೆಗಳು ತಮ್ಮ ಯುಗಮಾನದಲ್ಲಿ ರಾಜಮಾನ್ಯತೆಯನ್ನು ಪಡೆದುಕೊಂಡಿದ್ದವೋ ಅವುಗಳಿಂದ ಇತರ ಭಾಷೆಗಳಿಗೆ ಹಲವಾರು ಕೃತಿಗಳು ಅನುವಾದಗೊಂಡಿರುವುದನ್ನು ಚರಿತ್ರೆಯಲ್ಲಿ ಕಾಣಬಹುದಾಗಿದೆ. ಪ್ರಪಂಚದ ಭಾಷೆಗಳು ಹಲವು ಕಾರಣಗಳಿಂದ ಸಮಾನವಾಗಿ ಹಾಗೂ ಪ್ರಬುದ್ಧವಾಗಿ ಬೆಳೆದಿಲ್ಲದಿರುವುದರಿಂದ ಅನುವಾದಗಳ ಮೂಲಕ ಪ್ರತಿಯೊಂದು ಭಾಷೆಯೂ ತನ್ನನ್ನು ಮತ್ತಷ್ಟು ಸಂಪನ್ನಗೊಳಿಸಿಕೊಳ್ಳುವುದು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರೂ ಕಾರ್ಯಾಗಾರದ ಪ್ರಧಾನ ಸಂಯೋಜಕರೂ ಆದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು

ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರೂ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ಭೈರಪ್ಪ

ಅವರು ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್,

ಡಾ.ರವಿಶಂಕರ್ ಎ.ಕೆ ಹಾಗೂ

ಡಾ.ಕಿರಣಕುಮಾರ್ ಎಚ್.ಜಿ ಉಪಸ್ಥಿತರಿದ್ದರು. ಕರ್ನಾಟಕದ ವಿವಿಧ

ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧಕರು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande