ದಿನಕರ್ರ ಕೃತಿಗಳು ಯುಗಯುಗಾಂತರಕ್ಕೂ ಮಾರ್ಗದರ್ಶನ ನೀಡಲಿವೆ: ಪ್ರಧಾನಿ ಮೋದಿ
ನವದೆಹಲಿ, 23 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜನಜಾಗೃತಿ ಹಾಗೂ ರಾಷ್ಟ್ರೀಯ ಹೆಮ್ಮೆಯ ಭಾವನೆಗಳಿಂದ ತುಂಬಿರುವ ದಿನಕರ್ ಅವರ ಓಜಸ್ವಿ ಕವಿತೆಗಳು ಇಂದಿಗೂ ದೇಶವಾಸಿಗಳ
प्रधानमंत्री नरेन्द्र मोदी


ನವದೆಹಲಿ, 23 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಜನಜಾಗೃತಿ ಹಾಗೂ ರಾಷ್ಟ್ರೀಯ ಹೆಮ್ಮೆಯ ಭಾವನೆಗಳಿಂದ ತುಂಬಿರುವ ದಿನಕರ್ ಅವರ ಓಜಸ್ವಿ ಕವಿತೆಗಳು ಇಂದಿಗೂ ದೇಶವಾಸಿಗಳ ಹೃದಯದಲ್ಲಿ ಶೌರ್ಯ, ತೇಜಸ್ಸು ಹಾಗೂ ಆತ್ಮಗೌರವವನ್ನು ಮೂಡಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸಂದೇಶ ಹಂಚಿಕೊಂಡ ಅವರು, ರಾಷ್ಟ್ರಕವಿ ದಿನಕರ್ ಅವರ ಕೃತಿಗಳು ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಮಾತೃಭೂಮಿಯ ಮೇಲಿನ ಭಕ್ತಿ ಮತ್ತು ರಾಷ್ಟ್ರೀಯ ಭಾವನೆಯನ್ನು ಜನರಲ್ಲಿ ಜಾಗೃತಗೊಳಿಸಿವೆ ಎಂದು ತಿಳಿಸಿದರು.

‘ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜಯಂತಿಯಂದು ಅವರಿಗೆ ನನ್ನ ಶತಶತ ನಮನಗಳು. ಜನಜಾಗೃತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಭಾವನೆಗಳಿಂದ ತುಂಬಿರುವ ಅವರ ಓಜಸ್ವಿ ಕವಿತೆಗಳು ಇಂದಿಗೂ ದೇಶವಾಸಿಗಳ ಹೃದಯದಲ್ಲಿ ಶೌರ್ಯ, ತೇಜಸ್ಸು ಮತ್ತು ಆತ್ಮಗೌರವವನ್ನು ಮೂಡಿಸುತ್ತಿವೆ’ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ದಿನಕರ್ ಅವರ ಕೃತಿಗಳು ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜತೆಗೆ ಜನರನ್ನು ಪ್ರೇರೇಪಿಸುತ್ತವೆ. ಅವರ ವ್ಯಕ್ತಿತ್ವ ಹಾಗೂ ಕಾಲಜಯಿ ಕೃತಿಗಳು ಯುಗಯುಗಾಂತರಕ್ಕೂ ಭಾರತೀಯರಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.

ರಾಮಧಾರಿ ಸಿಂಗ್ ದಿನಕರ್ ಅವರು ಹಿಂದಿ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದು, ಅವರ ಕೃತಿಗಳಲ್ಲಿ ರಾಷ್ಟ್ರೀಯ ಭಾವನೆ, ಜನಜಾಗೃತಿ, ವೀರತೆ ಹಾಗೂ ಸಾಮಾಜಿಕ ಕಾಳಜಿಗಳ ಪರಿಣಾಮಕಾರಿ ಅಭಿವ್ಯಕ್ತಿ ಕಂಡುಬರುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande