ವಾಯುಪಡೆಗೆ ₹811 ಕೋಟಿಯಲ್ಲಿ 160 ಉಪಗ್ರಹ ನಿರ್ದೇಶಿತ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ
ನವದೆಹಲಿ, 23 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗಾಗಿ 160 ಸ್ಯಾಟಲೈಟ್ ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ಗಳನ್ನು ಖರೀದಿಸಲು ಭಾರತ ಡೈನಾಮಿಕ್ಸ್ ಲಿಮಿಟೆಡ್‌ನೊಂದಿಗೆ 810.79 ಕೋಟಿ ರೂ. ಮೊತ್
रक्षा सचिव राजेश कुमार सिंह बीडीएल अधिकारियों के साथ


ನವದೆಹಲಿ, 23 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗಾಗಿ 160 ಸ್ಯಾಟಲೈಟ್ ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ಗಳನ್ನು ಖರೀದಿಸಲು ಭಾರತ ಡೈನಾಮಿಕ್ಸ್ ಲಿಮಿಟೆಡ್‌ನೊಂದಿಗೆ 810.79 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರ ಸಮ್ಮುಖದಲ್ಲಿ ಬುಧವಾರ ನವದೆಹಲಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸುಮಾರು 100 ಕಿ.ಮೀ. ವ್ಯಾಪ್ತಿಯ ಈ ಉಪಗ್ರಹ ನಿರ್ದೇಶಿತ ಬಾಂಬ್‌ಗಳನ್ನು ಭಾರತೀಯ ಯುದ್ಧವಿಮಾನಗಳು ಶತ್ರುಗಳ ವಾಯುಪ್ರದೇಶವನ್ನು ಪ್ರವೇಶಿಸದೆ ಸುರಕ್ಷಿತ ದೂರದಿಂದಲೇ ಉಡಾಯಿಸಬಹುದಾಗಿದೆ.

ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಉಪಗ್ರಹ ನಿರ್ದೇಶಿತ ನಿಖರ ದಾಳಿ ಬಾಂಬ್ ಆಗಿದ್ದು, ಶತ್ರುಗಳ ವಾಯುನೆಲೆಗಳು ಮತ್ತು ರನ್‌ವೇಗಳನ್ನು ನಾಶಪಡಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಂಶೋಧನಾ ಕೇಂದ್ರ ಇಮಾರತ್ ಇದನ್ನು ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದೆ.

ಈ ಶಸ್ತ್ರಾಸ್ತ್ರವು ಉಪಗ್ರಹ ನ್ಯಾವಿಗೇಷನ್ ಹಾಗೂ ವಿದ್ಯುತ್-ದೃಶ್ಯ ಗುರಿಸಾಧಕ ತಂತ್ರಜ್ಞಾನವನ್ನು ಹೊಂದಿದ್ದು, ಹಗಲು ಮತ್ತು ರಾತ್ರಿ ಎರಡೂ ಸಂದರ್ಭಗಳಲ್ಲಿ ನಿಖರವಾಗಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಸುಮಾರು 125 ಕೆ.ಜಿ. ತೂಕ ಹೊಂದಿರುವುದರಿಂದ ಒಂದೇ ಯುದ್ಧವಿಮಾನದಲ್ಲಿ ಹಲವು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಹುದಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಕಾರ, ಶತ್ರುಗಳ ರನ್‌ವೇ, ಬಂಕರ್‌, ವಿಮಾನಗಳ ಹ್ಯಾಂಗರ್‌, ರಡಾರ್ ಕೇಂದ್ರಗಳು ಸೇರಿದಂತೆ ಬಲಿಷ್ಠ ಸೇನಾ ನೆಲೆಗಳನ್ನು ನಾಶಪಡಿಸಲು ಇದನ್ನು ಬಳಸಬಹುದಾಗಿದೆ. ಸುಖೋಯ್‌-30 ಹಾಗೂ ಜಾಗ್ವಾರ್ ಯುದ್ಧವಿಮಾನಗಳಿಂದ ಇದರ ಹಲವು ಯಶಸ್ವಿ ಪರೀಕ್ಷೆಗಳನ್ನು ಭಾರತೀಯ ವಾಯುಪಡೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿವೆ.

ಈ ಶಸ್ತ್ರಾಸ್ತ್ರದ ಎರಡು ರೂಪಾಂತರಗಳನ್ನು ಪರೀಕ್ಷಿಸಲಾಗಿದೆ. ಒಂದು ಉಪಗ್ರಹ ಮಾರ್ಗದರ್ಶನ ವ್ಯವಸ್ಥೆಯನ್ನು ಆಧರಿಸಿದ್ದರೆ, ಮತ್ತೊಂದು ಅತಿಗೆಂಪು ಗುರಿಸಾಧಕ ತಂತ್ರಜ್ಞಾನವನ್ನು ಬಳಸುತ್ತದೆ. ಇದು ಜಾಗ್ವಾರ್‌, ಹಾಕ್‌ ಮತ್ತು ಸುಖೋಯ್‌-30 ಎಂಕೆಐ ಸೇರಿದಂತೆ ವಿವಿಧ ಯುದ್ಧವಿಮಾನಗಳಿಂದ ಉಡಾಯಿಸಬಹುದಾದ ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ನಿಖರ ಮಾರ್ಗದರ್ಶಿತ ಗ್ಲೈಡ್ ಬಾಂಬ್ ಆಗಿದೆ.

ದೇಶದಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯಲ್ಲಿ ಶೇ.60ರಷ್ಟು ಸ್ವದೇಶಿ ಅಂಶ ಇರಲಿದೆ. 2027-28 ಮತ್ತು 2028-29ರ ಅವಧಿಯಲ್ಲಿ ವಾಯುಪಡೆಗೆ ಇದರ ಪೂರೈಕೆ ನಿಗದಿಯಾಗಿದೆ. ಆರಂಭಿಕ ಹಂತದಲ್ಲಿ 160 ಸ್ಯಾಟಲೈಟ್ ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ಗಳು ಹಾಗೂ ಸಂಬಂಧಿತ ಉಪಕರಣಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

-----------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande