ಕೋಲಾರ: ಅಕ್ರಮ ಮದ್ಯ ಮಾರಾಟ ಡಾಬಾ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ
ಮೇಡಿಹಾಳ ಗ್ರಾಮದ 'ಪೂರ್ವಿ ಫ್ಯಾಮಿಲಿ ರೆಸ್ಟೋರೆಂಟ್' ಡಾಬಾ ಮೇಲೆ ಅಬಕಾರಿ ದಾಳಿ; ೫.೨೨ ಲೀಟರ್ ಮದ್ಯ ಜಪ್ತಿ, ಮಾಲೀಕನ ವಿರುದ್ಧ ಪ್ರಕರಣ ದಾಖಲು
Excise raid on 'Purvi Family Restaurant'


ಕೋಲಾರ, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಅಬಕಾರಿ ಉಪ ಆಯುಕ್ತರ ನಿರ್ದೇಶನ ಹಾಗೂ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕೋಲಾರ ವಲಯದ ಅಬಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೋಲಾರ-ವೇಮಗಲ್ ರಸ್ತೆಯ ಮೇಡಿಹಾಳ ಗ್ರಾಮದಲ್ಲಿರುವ 'ಪೂರ್ವಿ ಫ್ಯಾಮಿಲಿ ರೆಸ್ಟೋರೆಂಟ್' ಡಾಬಾದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಕೋಲಾರ ತಾಲ್ಲೂಕು, ವೇಮಗಲ್ ಹೋಬಳಿ, ಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮೇಡಿಹಾಳ ಗ್ರಾಮದ ರಸ್ತೆ ಬದಿಯಲ್ಲಿರುವ ಈ ಡಾಬಾದ ಮೇಲೆ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಬಂದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಸ್ಥಳದಿಂದ ಒಟ್ಟು ೫.೨೨೦ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕೃತ್ಯಕ್ಕೆ ಸಂಬ0ಧಿಸಿದ0ತೆ ಡಾಬಾದ ಮಾಲೀಕರಾದ ೫೧ ವರ್ಷ ವಯಸ್ಸಿನ ಮಂಜುನಾಥ ಎಂ.ಎಸ್ ಎಂಬುವವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ರ ವಿವಿಧ ಕಲಂಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಕೋಲಾರ ವಲಯದ ಅಬಕಾರಿ ಉಪ ನಿರೀಕ್ಷಕರಾದ ಮುನಿರಾಜು. ಎಂ ಮತ್ತು ಅಬಕಾರಿ ಕಾನ್ಸ್ಟೇಬಲ್ ರಂಗನಾಥ. ಆರ್ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande