ಗರ್ಭಿಣೀಯರಿಗೆ ಸೀಮಂತ ಕಾರ್ಯಕ್ರಮ
ಗದಗ, 22 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗ ಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕೆಂದು ಆಡಳಿತ ವೈದ್ಯಾಧಿಕಾರಿ ಡಾ ಬಸನಗೌಡ ಪವಾಡಿ
ಫೋಟೋ


ಗದಗ, 22 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗ ಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕೆಂದು ಆಡಳಿತ ವೈದ್ಯಾಧಿಕಾರಿ ಡಾ ಬಸನಗೌಡ ಪವಾಡಿಗೌಡರ ಹೇಳಿದರು.

ಗದಗ ಗಜೇಂದ್ರಗಡ ತಾಲೂಕಿನ ಸರ್ಜಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಾಂತಗೇರಿ ವಲಯ ಮಟ್ಟದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೌಷ್ಠಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದೆ ಎಂದರು.

ನಂತರ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ ದೇಹದ ಆರೋಗ್ಯಕ್ಕೆ ಸಮತೋಲಿತ ಆಹಾರ ಅತ್ಯಗತ್ಯ, ಆಹಾರದ ಕೊರತೆ ಮಾತ್ರವಲ್ಲದೆ ಅತಿಯಾದ ಪೌಷ್ಟಿಕಾಂಶವು ದೇಹಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಹಾಗಾಗಿ ಅತೀಪೌಷ್ಟಿಕ,ಅಪೌಷ್ಟಿಕ ಆಹಾರಗಳೆರಡು ದೇಹಕ್ಕೆ ಅಪಾಯಕಾರಿಯಾಗಿದೆ.

ಅತಿಯಾದ ಪೌಷ್ಟಿಕ ಆಹಾರ ಸೇವನೆಯಿಂದ ದೇಹದ ತೂಕ ವಿಪರೀತವಾಗಿ ಹೆಚ್ಚಿ ಬೊಜ್ಜು ಉಂಟಾಗುತ್ತದೆ ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಕೆಲವು ವಿಟಮಿನ್ ಗಳು ದೇಹದಲ್ಲಿ ಅತಿಯಾಗಿ ಸಂಗ್ರಹಗೊಂಡರೆ ಅದು ಮೂತ್ರಪಿಂಡ ಮತ್ತು ಲಿವರ್ ಗೆ ಹಾನಿ ಉಂಟುಮಾಡುತ್ತದೆ ಹಾಗೆಯೇ ಅಪೌಷ್ಟಿಕತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆಯಾದಾಗ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಕಡಿಮೆಯಾಗಿ ಬೇಗನೆ ಸೋಂಕುಗಳು ತಗಲುತ್ತವೆ ಅಪೌಷ್ಟಿಕತೆ ಇದರಿಂದ ಸದಾ ಆಯಾಸ,ನಿಶ್ಯಕ್ತಿ ಮತ್ತು ತಲೆ ಸುತ್ತು ಬರುತ್ತದೆ ಹಾಗೆ ಕಬ್ಬಿಣಾಂಶ ಕೊರತೆಯಿಂದಾಗಿ ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುತ್ತದೆ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾದರೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತಗೊಳ್ಳುತ್ತದೆ ಆದ್ದರಿಂದ ಆರೋಗ್ಯವಾಗಿರಲು ಪೌಷ್ಟಿಕಾಂಶವುಳ್ಳ ಆಹಾರ, ಹಿತ,ಮಿತವಾದ ಮತ್ತು ಸಮತೋಲಿತ ಆಹಾರ ಅತ್ಯಗತ್ಯ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್,ಕೊಬ್ಬು, ವಿಟಮಿನ್ ಮತ್ತು ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಅಂಗನವಾಡಿ ಮೇಲ್ವಿಚಾರಕಿ ಸುವರ್ಣ ಹಾನಾಪೂರ ಮಾತನಾಡಿ ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ರಕ್ತ ಹೀನತೆ ಅಲಕ್ಷ ಮಾಡಬಾರದು ಆದ್ದರಿಂದ ರಕ್ತ ಹೀನತೆ ತಡೆಗಟ್ಟಲು ದಿನ ನಿತ್ಯ ಸೇವಿಸುವ ಆಹಾರದಲ್ಲಿ ಸ್ಥಳೀಯವಾಗಿ ಸಿಗುವ ಸೊಪ್ಪು,ತರಕಾರಿ,ಮೊಳಕೆ ಕಾಳು,ಬೇಳೆ ಕಾಳು,ದ್ವಿದಳ ಧಾನ್ಯಗಳು,ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಉತ್ತಮ ಪೌಷ್ಟಿಕಾಂಶಗಳು ದೊರೆಯಲಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಗರ್ಭಿಣಿಯರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮದ ಜತೆ ವಿವಿಧ ಪೌಷ್ಟಿಕಾಂಶವುಳ್ಳ ಪೌಷ್ಟಿಕ ಆಹಾರದ ಹಾಗೂ ಬರ್ಫಿ, ಲಸ್ಸಿ,ಸಿಹಿ ಪೊಂಗಲ್, ಚಿತ್ರನ್ನ,ಉಪ್ಪಿಟ್ಟು ಇತರೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ತಾಯಂದಿರಿಗೆ, ಕಿಶೋರಿಯರಿಗೆ ಅರಿವು ಮೂಡಿಸಲಾಯಿತು

ಈ ವೇಳೆ ಶಾಂತಗೇರಿ ವಲಯ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರಾದ ಸುವರ್ಣ ಚಿಗರಿ,ಸುಜಾತ ಗೌಡ್ರು,ರೇಣುಕಾ ನಾರಾಯಣಪುರ,ಶರಣಮ್ಮ ಚಿಣಿ,ಅಕ್ಕಮಹಾದೇವಿ ಹಳಗೇರಿ,ನಿಂಗಮ್ಮ ಮಾದರ,ಲಕ್ಷ್ಮಿಬಾಯಿ ಮಾದರ,ಶ್ರೀದೇವಿ ಸಜ್ಜನ, ಸುಶೀಲಾ ಶಾಂತಗೇರಿ, ನಾಗರತ್ನ ಲಕ್ಕುಂಡಿ, ಚೆನ್ನಮ್ಮ ಕಾಶಣ್ಣನವರ, ಸುನಂದ ಇಟಗಿ,ಅನ್ನಕ್ಕ ಚಿಣಿ, ಅಕ್ಕಮ್ಮ ಜೋಗಿ, ಸವಿತಾ ಪೂಜಾರ,ಭಾರತಿ ಹಿರೇಮಠ,ಬಸಮ್ಮ ಬೇವಿನಕಟ್ಟಿ,ಅಕ್ಷತಾ ಟೆಕ್ಕೆದ, ಸಮುದಾಯ ಆರೋಗ್ಯ ಅಧಿಕಾರಿ ಮಹಾಂತೇಶ ಮಾದರ,ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ ತುಕೋಳ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ ಪೂಜಾರ,ಆಶಾ ಕಾರ್ಯಕರ್ತೆ ಜ್ಯೋತಿ ನಾಗನೂರ,ಶಾರದಾ ಲಮಾಣಿ ಹಾಗೂ ಗರ್ಭಿಣಿಯರು,ಮಕ್ಕಳ ತಾಯಂದಿರು, ಕಿಶೋರಿಯರು ಹಾಜರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande