
ನವದೆಹಲಿ, 22 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಮಂಗಳವಾರ ‘ಕರಂ ಪೂಜೆ’ಯ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ನೀಡಿರುವ ರಾಷ್ಟ್ರಪತಿ ಮುರ್ಮು, ಪ್ರಕೃತಿಯ ಬಗೆಗಿನ ಕೃತಜ್ಞತೆ, ಕಾಯಕದ ಬಗೆಗಿನ ನಿಷ್ಠೆ ಹಾಗೂ ಸಹೋದರತ್ವದ ಭಾವನೆಯೊಂದಿಗೆ ಬೆಸೆದುಕೊಂಡಿರುವ ಕರಂ ಹಬ್ಬವು ಸಮೃದ್ಧ ಬುಡಕಟ್ಟು ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಜೀವಂತ ಅಭಿವ್ಯಕ್ತಿಯಾಗಿದೆ ಎಂದು ಹೇಳಿದ್ದಾರೆ.
ಕರಂ ಹಬ್ಬವು ಪ್ರಕೃತಿಯನ್ನು ಸಂರಕ್ಷಿಸುವ ಹಾಗೂ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುವ ಪ್ರೇರಣೆಯನ್ನು ನೀಡುತ್ತದೆ. ಈ ಹಬ್ಬವು ದೇಶದ ಎಲ್ಲ ಜನರ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಹಾರೈಸಿದ್ದಾರೆ.
ಪ್ರಕೃತಿ, ಕೃಷಿ ಹಾಗೂ ಸಹೋದರ-ಸಹೋದರಿಯರ ಪ್ರೀತಿಗೆ ಸಂಬಂಧಿಸಿದ ಪ್ರಮುಖ ಬುಡಕಟ್ಟು ಹಾಗೂ ಜನಪದ ಹಬ್ಬವಾಗಿರುವ ಕರಂ ಪೂಜೆಯನ್ನು ಮುಖ್ಯವಾಗಿ ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಆಚರಿಸಲಾಗುತ್ತದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.