ಬಳ್ಳಾರಿ-ವಿಜಯನಗರ ರಾಷ್ಟಿಯ ಲೋಕ್ ಅದಾಲತ್ : 71 ಸಾವಿರಕ್ಕೂ ಹೆಚ್ಚು -25 ಕೋಟಿ ರೂ.ಗೂ ಅಧಿಕ ಪರಿಹಾರ
ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 19 ರಂದು ಹಮ್ಮಿಕೊಳ್ಳಲಾಗಿದ್ದ. ರಾಷ್ಟ್ರೀಯ ಲೋಕ್ ಅದಾಲತ್’ ಅಭೂತಪೂರ್ವ ಯಶಸ್ಸು ಕಂಡಿದ್ದು, ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ
ಬಳ್ಳಾರಿ-ವಿಜಯನಗರ ರಾಷ್ಟಿಯ ಲೋಕ್ ಅದಾಲತ್ : 71 ಸಾವಿರಕ್ಕೂ ಹೆಚ್ಚು -25 ಕೋಟಿ ರೂ.ಗೂ ಅಧಿಕ ಪರಿಹಾರ


ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 19 ರಂದು ಹಮ್ಮಿಕೊಳ್ಳಲಾಗಿದ್ದ. ರಾಷ್ಟ್ರೀಯ ಲೋಕ್ ಅದಾಲತ್’ ಅಭೂತಪೂರ್ವ ಯಶಸ್ಸು ಕಂಡಿದ್ದು, ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 71,223 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.

ಈ ಕುರಿತು ಮಾಹಿತಿ ನೀಡಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿದ್ಧಲಿಂಗ ಪ್ರಭು ಅವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 31 ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ಯಶಸ್ವಿಯಾಗಿ ಜರುಗಿದೆ ಎಂದು ತಿಳಿಸಿದ್ದಾರೆ.

*4,264 ಬಾಕಿ ಪ್ರಕರಣಗಳ ಇತ್ಯರ್ಥ:*

ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 4,264 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದ್ದು, ಒಟ್ಟು 15,42,66,848 (15.42 ಕೋಟಿ) ರೂಪಾಯಿಗಳ ಪರಿಹಾರ ಮೊತ್ತವನ್ನು ಕಕ್ಷಿದಾರರಿಗೆ ಕೊಡಮಾಡಲಾಗಿದೆ.

*ಇತ್ಯರ್ಥಗೊಂಡ ಪ್ರಕರಣಗಳ ವಿವರ:*

ಜನನ ಪ್ರಮಾಣ ಪತ್ರ ಅರ್ಜಿಗಳು: 1,011

ದಂಡ ವಿಧಿಸಬಹುದಾದ ಕ್ರಿಮಿನಲ್ ಪ್ರಕರಣಗಳು: 2,357

ಇತರೆ ಕ್ರಿಮಿನಲ್ ಪ್ರಕರಣಗಳು: 409

ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು: 174

ಚೆಕ್ ಬೌನ್ಸ್ ಪ್ರಕರಣಗಳು: 73

ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು: 53

ಇತರೆ ಎಕ್ಸಿಕ್ಯೂಷನ್ ಪ್ರಕರಣಗಳು: 52

ಬ್ಯಾಂಕ್ ದಾವೆಗಳು: 38

ಇತರೆ ಸಿವಿಲ್ ಪ್ರಕರಣಗಳು: 20

ಪಾಲು ವಿಭಾಗ ದಾವೆಗಳು: 17

ನಿರ್ದಿಷ್ಟ ಪರಿಹಾರದ ದಾವೆಗಳು: 12

ಕೌಟುಂಬಿಕ ಪ್ರಕರಣಗಳು: 11

ಹಣ ವಸೂಲಾತಿ ದಾವೆಗಳು: 10

ವಾಣಿಜ್ಯ ದಾವೆಗಳು: 08

ಎಂ.ವಿ.ಸಿ. ಅಮಲ್ಜಾರಿ ಪ್ರಕರಣಗಳು: 05

ನೌಕರರ ಪರಿಹಾರ ಪ್ರಕರಣಗಳು: 02

ಎಫ್.ಡಿ.ಪಿ. ಪ್ರಕರಣಗಳು: 02

*ವ್ಯಾಜ್ಯ ಪೂರ್ವ ಪ್ರಕರಣಗಳಿಂದ 10.45 ಕೋಟಿ ರೂ. ಜಮೆ:*

ವ್ಯಾಜ್ಯ ಪೂರ್ವ (ಪ್ರಿ-ಲಿಟಿಗೇಷನ್) ಹಂತದಲ್ಲಿದ್ದ ಬರೋಬ್ಬರಿ 66,959 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಇವುಗಳಿಂದ ಒಟ್ಟು 10,45,22,074/ (10.45 ಕೋಟಿ) ರೂಪಾಯಿಗಳು ವಿವಿಧ ಬ್ಯಾಂಕ್ ಹಾಗೂ ಸರ್ಕಾರಿ ಇಲಾಖೆಗಳ ಖಜಾನೆಗೆ ಜಮೆಯಾಗಿವೆ.

*ಮತ್ತೆ ಒಂದಾದ 5 ದಂಪತಿಗಳು:*

ವಿಚ್ಛೇದನ ಹಾಗೂ ವೈವಾಹಿಕ ಕಲಹದಂತಹ 5 ಕೌಟುಂಬಿಕ ಸಮಸ್ಯೆಗಳ ಪ್ರಕರಣಗಳಲ್ಲಿ ನ್ಯಾಯಾಧೀಶರು ನಡೆಸಿದ ರಾಜಿ ಸಂಧಾನ ಫಲಪ್ರದವಾಗಿದ್ದು, ಐದು ಜೋಡಿಗಳು ಮನಸ್ತಾಪ ಮರೆತು ಮತ್ತೆ ಜೊತೆಯಾಗಿ ಜೀವನ ನಡೆಸಲು ಸಮ್ಮತಿಸಿ ಒಂದಾಗಿವೆ.

ಈ ಅದಾಲತ್ನ ಯಶಸ್ಸಿಗೆ ಶ್ರಮಿಸಿದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಲಿಂಗ ಪ್ರಭು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande