ಸ್ಫರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ತಂತ್ರಜ್ಞಾನ ಪೂರಕ: ಪ್ರೊ.ಕೆ ರಮೇಶ್
ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಇಂದಿನ ಯುವ ಜನತೆಗೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಂತ್ರಜ್ಞಾನದ ಸಮರ್ಪಕ ಬಳಕೆ ಸೂಕ್ತ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ ರಮೇಶ್ ಅವರು ಹೇಳಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.
Technology helps in competitive exam preparation


Technology helps in competitive exam preparation


Technology helps in competitive exam preparation


ಬಳ್ಳಾರಿ, 21 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಇಂದಿನ ಯುವ ಜನತೆಗೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಂತ್ರಜ್ಞಾನದ ಸಮರ್ಪಕ ಬಳಕೆ ಸೂಕ್ತ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ ರಮೇಶ್ ಅವರು ಹೇಳಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಭಾಭವನದಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ವಿವಿಯ ಆಂತರಿಕ ಗುಣಮಟ್ಟ ಕೋಶದ ಸಹಭಾಗಿತ್ವದಲ್ಲಿ ಆರಂಭವಾಗಿರುವ ಎರಡು ದಿನಗಳ ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ತಂತ್ರಜ್ಞಾನವು ಎಲ್ಲ ಕ್ಷೇತ್ರದಲ್ಲಿ ಮನೆ ಮಾಡಿದೆ. ಆಧುನಿಕ ವಿದ್ಯಮಾನಗಳಿಗೆ ತಕ್ಕಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾಲಕ್ರಮೇಣ ಆಧುನೀಕರಣಗೊಂಡು ನವಜ್ಞಾನಗಳನ್ನು, ಕೌಶಲ್ಯ, ಹೊಸ ಆವಿಷ್ಕಾರಗಳು, ಸಂಶೋಧನಾ ಕ್ರಮಗಳನ್ನು ಮಷಿನ್ ಲರ್ನಿಂಗ್, ಎಐ ಮಾದರಿಯ ತಂತ್ರಜ್ಞಾನಗಳ ಮೂಲಕ ಸಾಂಪ್ರದಾಯಿಕ ಅಧ್ಯಯನ ಪದ್ಧತಿಯೊಂದಿಗೆ ನವ ಮಾದರಿಯ ಕಲಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಂಗಪ್ಪ ಅವರು ಮಾತನಾಡಿ, ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕೇವಲ ಓದುವ ಹವ್ಯಾಸದಿಂದ ಪಾಸಾಗÀಲು ಸಾಧ್ಯವಿಲ್ಲ. ಬದಲಾಗಿ ನಿರ್ದಿಷ್ಟ ಕ್ರಮಾಂಕದ ಓದುವ ಪರಿಕ್ರಮಗಳನ್ನು ಪಟ್ಟಿ ಮಾಡಿಕೊಂಡು ಆ ಪ್ರಕಾರ ಯೋಜನೆ ರೂಪಿಸಿ ಅಧ್ಯಯನ ಮಾಡಬೇಕೆಂದರು.

ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅವರು ಮಾತನಾಡಿ, ಕೇವಲ ಒಂದು ಅಥವಾ ಎರಡು ದಿನಗಳ ತರಬೇತಿಯಿಂದ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ. ಹೀಗಾಗಿ ವಿಶ್ವವಿದ್ಯಾಲಯದಲ್ಲಿ ಕೆಎಎಸ್-ಐಎಎಸ್ ಪರೀಕ್ಷಾ ತರಬೇತಿಯನ್ನು ದಿನವೂ ನೀಡಲು ವಿಶ್ವವಿದ್ಯಾಲಯವು ಯೋಜನೆ ರೂಪಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದು ಘೋಷಿಸಿದರು.

ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿ ಹಂತದಲ್ಲಿ ಕೆ-ಸೆಟ್ ಪರೀಕ್ಷೆ ಉತ್ತೀರ್ಣವಾಗಿರುವ ವಿವಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕೆ-ಸೆಟ್ ಪರೀಕ್ಷೆ ತರಬೇತಿ ಶಿಬಿರದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande