ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಶೂಟಿಂಗ್ ಆಟಗಾರ್ತಿಯರಿಗೆ ರಾಷ್ಟ್ರಪತಿ ಸೇರಿದಂತೆ ಗಣ್ಯರ ಅಭಿನಂದನೆ
ನವದೆಹಲಿ, 20 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಏಷ್ಯನ್ ಕ್ರೀಡಾಕೂಟ–2026ರಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮಹಿಳಾ ಶೂಟಿಂಗ್ ಆಟಗಾರ್ತಿಯರಾದ ಇಲಾವೆನಿಲ್ ವಲರಿವನ್, ವಿದರ್ಶಾ ಕೆ. ವಿನೋದ್ ಮತ್ತು ಸೋನಂ ಉತ್ತಮ್ ಮಸ್ಕರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಕ
प्रतीकात्मक


ನವದೆಹಲಿ, 20 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಏಷ್ಯನ್ ಕ್ರೀಡಾಕೂಟ–2026ರಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮಹಿಳಾ ಶೂಟಿಂಗ್ ಆಟಗಾರ್ತಿಯರಾದ ಇಲಾವೆನಿಲ್ ವಲರಿವನ್, ವಿದರ್ಶಾ ಕೆ. ವಿನೋದ್ ಮತ್ತು ಸೋನಂ ಉತ್ತಮ್ ಮಸ್ಕರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತೀಯ ತಂಡ ಬೆಳ್ಳಿ ಪದಕ ಗೆದ್ದಿದೆ. ಈ ಸಾಧನೆಗೆ ಅಭಿನಂದನೆ ಸಲ್ಲಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತಕ್ಕೆ ಈ ಕ್ರೀಡಾಕೂಟದಲ್ಲಿ ಪದಕದ ಖಾತೆ ತೆರೆಯುವ ಮೂಲಕ ದೇಶದ ಗೌರವ ಹೆಚ್ಚಿಸಿದ್ದಕ್ಕಾಗಿ ಆಟಗಾರ್ತಿಯರನ್ನು ಶ್ಲಾಘಿಸಿದ್ದಾರೆ. ಅವರ ಮುಂದಿನ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲೂ ಇಲಾವೆನಿಲ್ ವಲರಿವನ್ ಮತ್ತೊಂದು ಬೆಳ್ಳಿ ಪದಕ ಗೆದ್ದಿರುವುದು ವಿಶೇಷ ಎಂದು ಹೇಳಿದ್ದಾರೆ. ದೊಡ್ಡ ವೇದಿಕೆಯಲ್ಲಿ ಅವರ ಸತತ ಉತ್ತಮ ಪ್ರದರ್ಶನ, ಸಂಯಮ ಮತ್ತು ವಿಶ್ವಮಟ್ಟದ ನಿಖರತೆಗೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಮಹಿಳಾ ತಂಡದ ಈ ಸಾಧನೆಯಿಂದ ದೇಶ ಹೆಮ್ಮೆಪಡುವಂತಾಗಿದೆ ಎಂದು ಹೇಳಿದ್ದಾರೆ. ಭಾರತದ ಕ್ರೀಡಾ ಪಯಣದಲ್ಲಿ ಮತ್ತೊಂದು ಗಮನಾರ್ಹ ಅಧ್ಯಾಯ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕದ ಖಾತೆ ತೆರೆದಿದೆ ಎಂದು ಹೇಳಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಇಲಾವೆನಿಲ್ ವಲರಿವನ್, ಸೋನಂ ಉತ್ತಮ್ ಮಸ್ಕರ್ ಮತ್ತು ವಿದರ್ಶಾ ಕೆ. ವಿನೋದ್ ಅವರಿಗೆ ಮುಂದಿನ ಸ್ಪರ್ಧೆಗಳಿಗಾಗಿ ಶುಭ ಹಾರೈಸಿದ್ದಾರೆ.

ಇಲಾವೆನಿಲ್ ವಲರಿವನ್, ಸೋನಂ ಮಸ್ಕರ್ ಮತ್ತು ವಿದರ್ಶಾ ಕೆ. ವಿನೋದ್ ಅವರನ್ನೊಳಗೊಂಡ ಭಾರತೀಯ ತಂಡವು ಭಾನುವಾರ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿತ್ತು. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಜಯಿಸಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande