ಶ್ರೀಶೈಲ ಪಾದಯಾತ್ರೆಗೆ ತೆರಳಿದ್ದ ಯುವಕ ನಾಪತ್ತೆ: ಪತ್ತೆಗೆ ಮನವಿ
ಗದಗ, 02 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಶ್ರೀಶೈಲಕ್ಕೆ ಪಾದಯಾತ್ರೆಗೆ ತೆರಳಿದ್ದ 29 ವರ್ಷದ ಯುವಕನೊಬ್ಬ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಯುವಕ ಮಹಿಷವಾಡಗಿ ಗ್ರಾಮದ ಭೈರಪ್ಪಾ ಬಸಪ್ಪಾ ಶಿಂಗೆ (29) ಕೂಲಿ ಕೆಲಸ ಮಾಡಿಕೊಂಡಿದ್ದ ಇವನು 02 ಮಾರ್ಚ್ 2026 ರಂದು ರಾತ್ರಿ ಸುಮಾರು 9.30ಕ್ಕೆ ಗ್ರಾಮ
ಫೋಟೋ


ಗದಗ, 02 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಶ್ರೀಶೈಲಕ್ಕೆ ಪಾದಯಾತ್ರೆಗೆ ತೆರಳಿದ್ದ 29 ವರ್ಷದ ಯುವಕನೊಬ್ಬ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಯುವಕ ಮಹಿಷವಾಡಗಿ ಗ್ರಾಮದ ಭೈರಪ್ಪಾ ಬಸಪ್ಪಾ ಶಿಂಗೆ (29) ಕೂಲಿ ಕೆಲಸ ಮಾಡಿಕೊಂಡಿದ್ದ ಇವನು 02 ಮಾರ್ಚ್ 2026 ರಂದು ರಾತ್ರಿ ಸುಮಾರು 9.30ಕ್ಕೆ ಗ್ರಾಮದವರೊಂದಿಗೆ ಶ್ರೀಶೈಲಕ್ಕೆ ಪಾದಯಾತ್ರೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿರುತ್ತಾನೆ

ಶ್ರೀಶೈಲಕ್ಕೆ ತೆರಳಿದ್ದ ಗ್ರಾಮದ ಇತರರು ಸುಮಾರು 20 ದಿನಗಳ ಬಳಿಕ ಗ್ರಾಮಕ್ಕೆ ವಾಪಸ್ ಬಂದಿದ್ದರೂ, ಭೈರಪ್ಪಾ ಅವರೊಂದಿಗೆ ಮರಳಿ ಬಂದಿರಲಿಲ್ಲ. ಕುಟುಂಬಸ್ಥರು ಸಂಬಂಧಿಕರ ಮನೆ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿ ವಿಚಾರಿಸಿದರೂ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಭೈರಪ್ಪಾ ಅವರ ತಾಯಿ ಶಾನವ್ವ ಬಸಪ್ಪಾ ಶಿಂಗೆ ಅವರು 26 ಮಾರ್ಚ್ 2026 ರಂದು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಾಪತ್ತೆಯಾದ ಯುವಕನು ದುಂಡು ಮುಖ, ಗೋಧಿ ಕೆಂಪು ಮೈಬಣ್ಣ ಹೊಂದಿದ್ದು 5 ಅಡಿ 1 ಇಂಚು ಸದೃಢ ಮೈಕಟ್ಟು ಹೊಂದಿದ್ದು ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾನೆ ಮನೆ ಬಿಟ್ಟಾಗಆಕಾಶ ನೀಲಿ ಬಣ್ಣದ ಬರ್ಮುಡಾ ಮತ್ತು ಬಿಳಿ ಬಣ್ಣದ ಟೀ-ಶರ್ಟ್ ಧರಿಸಿರುತ್ತಾನೆ ಹಾಗೂ ಬಲಗೈ ಮೇಲೆ ಆಂಜನೇಯನ ಟ್ಯಾಟೋ (ಹಚ್ಚೆ) ಇರುತ್ತದೆ.

ನಾಪತ್ತೆಯಾಗಿರುವ ಯುವಕನ ಚಹರೆ ಅಥವಾ ಇರುವಿಕೆಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಅಥಣಿ ಪೊಲೀಸ್ ಠಾಣೆ: 08289-251133

ಪೊಲೀಸ್ ಕಂಟ್ರೋಲ್ ರೂಂ: 112 ತನಿಖಾಧಿಕಾರಿ ಮೊಬೈಲ್: 9480804062 ತಿಳಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande