ಕೋಲಾರ: ಹಣ ನೀಡದ ತಂದೆಯ ಕೊಲೆ ಮಾಡಿದ ಪುತ್ರನ ಬಂಧನ
ಹಣಕ್ಕಾಗಿ ರಾಡ್ನಿಂದ ಹೊಡೆದು ತಂದೆಯ ಕೊಲೆ ; ಆರೋಪಿಯ ಬಂಧನ
ಸೀಮೇಶ್ಕರ್, ಕೊಲೆ ಆರೋಪಿ


ಕೋಲಾರ, ೦೨ ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಖರ್ಚಿಗೆ ಹಣದ ಕೊಡದ ತಂದೆಯ ಮೇಲೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಆ.೨೯ ರಂದು ಬಂಗಾರಪೇಟೆ ಪಟ್ಟಣ ವಿಜಯನಗರದ ೫ನೇ ಕ್ರಾಸ್ ನಲ್ಲಿ ವಾಸವಿರುವ ವೆಂಕಟಕೃಷ್ಣ ಎಂಬುವರಿಗೆ ಯಾರೂ ಹೊಡೆದು ಅಥವಾ ವಾಹನದಿಂದ ಬಿದ್ದು ಗಾಯಗೊಂಡಿರುತ್ತಾರೆಂದು ಅವರ ಎರಡನೇ ಮಗನಾದ ಸಿಮೇಶ್ಕರ್ ರವರು ಪೊಲೀಸರಿಗೆ ದೂರು ನೀಡಿದ್ದರು. ವೆಂಕಟಕೃಷ್ಣನವರಿಗೆ ಬಂಗಾರಪೇಟೆ, ಕೋಲಾರ ಮತ್ತು ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು ವೆಂಕಟಕೃಷ್ಣ ರವರು ಗುಣವಾಗದೆ ಆ.೩೦ ರಂದು ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು.

ಸಾವಿಗೆ ಸ್ವಷ್ಠ ಕಾರಣ ಸಿಗದ ಕಾರಣ ಬಂಗಾರಪೇಟೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆನಂತರ ವಿನೇಶ್ಕರ್ ರವರು ವೆಂಕಟಕೃಷ್ಣ ಅವರ ವಾಸದ ಮನೆಯ ಸಮೀಪದ ಜನರನ್ನು ವಿಚಾರಣೆ ಮಾಡಿ ತಿಳಿದುಕೊಂಡಾಗ ವೆಂಕಟಕೃಷ್ಣ ರವರನ್ನು ಅವರ ಎರಡನೇ ಮಗನಾದ ಸಿಮೇಶ್ಕರ್ ರವರು ಆತನ ಖರ್ಚಿಗೆ ತನ್ನ ತಂದೆ ಹಣ ಕೊಡಲಿಲ್ಲವೆಂದು ಕುಪಿತಗೊಂಡು ಹಲ್ಲೆ ನಡೆಸಿದ. ಮನೆಯೊಳಗೆ ಎಳೆದುಕೊಂಡು ಹೋಗಿ ಮನೆಯಲ್ಲಿದ್ದ ಕಬ್ಬಿಣದ ಗಡಾರಿಯಿಂದ ತಲೆ, ಕಣ್ಣಿನ ಬಳಿ, ಬಾಯಿ, ಮುಖ ಹಾಗೂ ಮರ್ಮಾಂಗದ ಬಳಿ ಹೊಡೆದು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿತ್ತು.

ಆನಂತರ ಬಂಗಾರಪೇಟೆ ಪೊಲೀಸರು ಸ್ಥಳ ಪರಶೀಲನೆ ನಡೆಸಿ ನೆರೆಹೊರೆಯವರನ್ನು ವಿಚಾರಣೆ ನಡೆಸಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಖಚಿತ ಪಡಿಸಿಕೊಂಡು ನಂತರ ಆರೋಪಿ ಸಿಮೇಶ್ಕರ್ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು ಆರೋಪಿ ತಪ್ಪೊಪ್ಪಿಕೊಂಡಿದ್ದು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಗಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್.ಸಿ ಮತ್ತು ಪಿ.ಎಸ್.ಐ ರಾಜಣ್ಣ ಎಸ್.ವಿ ಸಿಬ್ಬಂದಿಯವರಾದ ಚಲಪತಿ, ಹರೀಶ, ಸಂತೋಷ್ಕುಮಾರ್, ಸುನಿಲ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande