
ಗದಗ, 02 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಬರಗಾಲ ವೀಕ್ಷಣೆ ಎಂದು ಹೇಳಿ ಗದಗ ಜಿಲ್ಲೆಗೆ ಮುಖ್ಯಮಂತ್ರಿ ಆದ ನಂತರ ಡಿಕೆ ಶಿವಕುಮಾರ್ ಅವರ ಭೇಟಿ ರೈತರ ಸಂಕಟಕ್ಕೆ ಸ್ಪಂದಿಸುವ ಕಾರ್ಯಕ್ರಮ ಆಗಬೇಕೆ ಹೊರತು ಇದು ಫೋಟೋ ಪ್ರೋಗ್ರಾಮ್ ಆಗದಿರಲಿ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವುದೇ ಶಿಸ್ತು ವ್ಯವಸ್ಥೆ ಇಲ್ಲದ ಅವರ ಭೇಟಿ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಫೋಟೋ ಕಾರ್ಯಕ್ರಮ ಆಗಿತ್ತು ಹೊರತು ರೈತರ ಸಂಕಟವನ್ನು ಕೇಳುವ ಗೋಜಿಗೆ ಅವರು ಹೋಗಲಿಲ್ಲ. ನೂರಾರು ಸಂಖ್ಯೆಯಲ್ಲಿ ಬಂದ ರೈತರು ತಮ್ಮ ತಮ್ಮ ಕಷ್ಟಗಳನ್ನು ಮನವಿ ರೂಪದಲ್ಲಿ ಸಲ್ಲಿಸಲು ಬಂದರು , ಮನವಿ ಸ್ವೀಕರಿಸಲು ಯಾವುದೇ ತಯಾರಿ ಹಾಗೂ ವ್ಯವಸ್ಥೆ ಮಾಡದೆ ಕೇವಲ ಕಾಂಗ್ರೆಸ್ ಕಾರ್ಯಕರ್ತರನ್ನು ಓಲೈಸಲು ಈ ಕಾರ್ಯಕ್ರಮ ನಡೆದಂತಿತ್ತು ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಜಿಲ್ಲಾಡಳಿತದ ವೈಫಲ್ಯವನ್ನು ಖಂಡಿಸಿದ್ದಾರೆ.
ಮನವಿ ಸಲ್ಲಿಸಲು ಒಂದು ಜಾಗವನ್ನು ನಿಗದಿ ಮಾಡಿ ಅದಕ್ಕೆ ಸಮಯವನ್ನು ಕೂಡ ನಿಗದಿ ಮಾಡಿ ಅಲ್ಲಿ ಯಾವುದೇ ವ್ಯವಸ್ಥೆ ಇರದೆ ಕೇವಲ ಕೃಷಿಗಳನ್ನು ಬ್ಯಾರೆಕೆರಡುಗಳನ್ನು ಹಾಕಿ ಸುಮಾರು ನಾಲ್ಕು ತಾಸುಗಳ ರೈತರು, ಸಂಘಟನೆಯ ಮುಖಂಡರು, ಜಿಲ್ಲೆಯ ಪ್ರಮುಖರು ಕಾದು ಕುಳಿತರು ಮನವಿ ಸ್ವೀಕರಿಸಲು ಮುಖ್ಯಮಂತ್ರಿಗಳು ಬರಲೇ ಇಲ್ಲ. ಟಿಪಿ ಎಲ್ಲಿರದ ಕಾರ್ಯಕ್ರಮಗಳಿಗೆ ಶಾಸಕರು ಅವರನ್ನು ಕರೆದುಕೊಂಡು ಹೋಗಿ ಸಮಯ ವ್ಯರ್ಥ ಮಾಡಿ ರೈತರನ್ನು ಕಾಯಿಸಿ ಸತಾಯಿಸಿ ಮನವಿ ಸಲ್ಲಿಸುವ ಜಾಗವನ್ನು ಬೇರೆಡಿಗೆ ಸ್ಥಳಾಂತರಿಸಿ , ಗೊಂದಲವನ್ನು ಸೃಷ್ಟಿಸಿ ಮುಖ್ಯಮಂತ್ರಿಗಳಿಗೆ ಮನವಿ ಕೊಡದಂತೆ ಷಡ್ಯಂತರವನ್ನು ರಚಿಸಿ ಇದರಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಯಶಸ್ವಿಯಾಯಿತು ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರಾ ವೆಂಕನಗೌಡ ಆರ್ ಗೋವಿಂದಗೌಡ್ರ ಅವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಬರಗಾಲದ ವರದಿ ತಮ್ಮ ಕೈ ತಲುಪಲು ಆರು ದಿನಗಳು ಬೇಕೆಂದು ಮುಖ್ಯಮಂತ್ರಿಗಳು ಹೇಳಿ ಹೋಗಿದ್ದಾರೆ ಆರು ದಿನಗಳ ನಂತರ ಗದಗ್ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತವೆಂದು ಘೋಷಣೆ ಆಗದಿದ್ದರೆ ರೈತರ ಕೋಪ ತಾಪ ಹಾಗೂ ಪ್ರತಿಭಟನೆಯನ್ನು ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಎದುರಿಸಬೇಕಾಗುತ್ತದೆ ಎಂದು ವೆಂಕನಗೌಡ ಗೋವಿಂದಗೌಡ್ರು ಎಚ್ಚರಿಸಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / lalita MP