ಶ್ರೇಷ್ಠ ಪುರುಷನ ಜೀವನ ಪರೋಪಕಾರ, ಲೋಕಕಲ್ಯಾಣಕ್ಕೆ ಮೀಸಲು: ಪ್ರಧಾನಿ ಮೋದಿ
ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಶ್ರೇಷ್ಠ ಪುರುಷನ ಜೀವನ ಪರೋಪಕಾರ ಮತ್ತು ಲೋಕಕಲ್ಯಾಣಕ್ಕಾಗಿ ಇರಬೇಕು ಎಂಬ ಸಂದೇಶ ಸಾರುವ ಸುಭಾಷಿತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಸ್ಕೃತದ ಶ್ಲೋಕವೊಂದನ್
प्रधानमंत्री नरेन्द्र मोदी (फाइल फोटो)


ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಶ್ರೇಷ್ಠ ಪುರುಷನ ಜೀವನ ಪರೋಪಕಾರ ಮತ್ತು ಲೋಕಕಲ್ಯಾಣಕ್ಕಾಗಿ ಇರಬೇಕು ಎಂಬ ಸಂದೇಶ ಸಾರುವ ಸುಭಾಷಿತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಸಂಸ್ಕೃತದ ಶ್ಲೋಕವೊಂದನ್ನು ಹಂಚಿಕೊಂಡಿದ್ದು, “ಸ್ವಾಧೀನೈವ ಸಮೃದ್ಧಿರ್ಜನೋಪಜೀವ್ಯತ್ವಮುಚ್ಛ್ರಯಶ್ಛಾಯಾ। ಸತ್ಪುಂಸೋ ಮರುಭೂರಿಖ ಜೀವನಮಾತ್ರಂ ಸಮಾಶಾಸ್ಯಮ್॥” ಎಂದು ಉಲ್ಲೇಖಿಸಿದ್ದಾರೆ.

ಈ ಶ್ಲೋಕದ ಅರ್ಥವನ್ನು ವಿವರಿಸಿರುವ ಅವರು, ಸ್ವಾವಲಂಬಿ ಸಮೃದ್ಧಿಯೇ ನಿಜವಾದ ವೈಭವ ಹಾಗೂ ಇತರರಿಗೆ ಆಶ್ರಯ ಮತ್ತು ಆಧಾರವಾಗುವುದೇ ನಿಜವಾದ ಶ್ರೇಷ್ಠತೆ ಎಂಬ ಸಂದೇಶವನ್ನು ನೀಡಿದ್ದಾರೆ. ಮರುಭೂಮಿಯಲ್ಲಿ ನೆರಳು ಮತ್ತು ಜೀವ ಎರಡೂ ಅಪರೂಪದ ವರದಾನಗಳಾಗಿರುವಂತೆ, ಶ್ರೇಷ್ಠ ಪುರುಷನ ಜೀವನವೂ ಪರೋಪಕಾರ ಮತ್ತು ಲೋಕಕಲ್ಯಾಣಕ್ಕಾಗಿ ಇರಬೇಕು ಎಂಬ ಆಶಯವನ್ನು ಶ್ಲೋಕ ಹೊಂದಿದೆ.

ಈ ಸುಭಾಷಿತವು ಸಂಸ್ಕೃತದ ಪ್ರಸಿದ್ಧ ನೀತಿ ಸಂಗ್ರಹ ಗ್ರಂಥ ‘ಸುಭಾಷಿತರತ್ನಭಾಂಡಾಗಾರಂ’ನಲ್ಲಿ ಸಂಕಲಿತವಾಗಿರುವ ಸಾಂಪ್ರದಾಯಿಕ ಮುಕ್ತಕ ಸುಭಾಷಿತವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande