
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ದೈಹಿಕ ರೂಪದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲ್ಗಳಿಗೆ ನಟಿ ರಮ್ಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕತ್ರಿನಾ ಅವರ ‘ಮೊದಲು-ನಂತರ’ದ ಫೋಟೋಗಳನ್ನು ಹೋಲಿಸಿ ಮಾಡಲಾಗುತ್ತಿರುವ ಟ್ರೋಲ್ಗಳ ಹಿನ್ನೆಲೆಯಲ್ಲಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿ ರಮ್ಯಾ, ಮಹಿಳೆಯ ದೇಹದ ರಚನೆಯ ಕುರಿತು ಸಾರ್ವಜನಿಕವಾಗಿ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮದುವೆ ಹಾಗೂ ಮಗುವಿನ ಬಳಿಕ ಮಹಿಳೆಯ ದೇಹದಲ್ಲಿ ಬದಲಾವಣೆಗಳಾಗುವುದು ಸಹಜ. ಪ್ರತಿಯೊಬ್ಬ ಮಹಿಳೆಯೂ ಯಾವಾಗಲೂ ಒಂದೇ ರೀತಿಯ ದೇಹರಚನೆಯನ್ನು ಹೊಂದಿರಬೇಕು ಎಂಬ ನಿರೀಕ್ಷೆ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಒಂದು ಹೆಣ್ಣಿನ ದೇಹಕ್ಕೆ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಬೇಕಿಲ್ಲ. ಹೆಣ್ಣು ಯಾವಾಗಲೂ ಒಂದೇ ತರ ಇರೋಕೆ ಆಗಲ್ಲ. ಕತ್ರಿನಾಗೆ ಈಗ ಮಗುವಾಗಿದೆ. ಅವರ ದೇಹದ ರಚನೆಯೂ ಸರಿಯಾಗಿದೆ. ಬಾಡಿ ಶೇಮಿಂಗ್ ತಪ್ಪು” ಎಂದು ರಮ್ಯಾ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕತ್ರಿನಾ ಕೈಫ್ ಅವರ ದೇಹದ ಕುರಿತು ಮಾಡಲಾಗುತ್ತಿರುವ ಟೀಕೆಗಳು ಮಹಿಳೆಯರ ದೇಹದ ಬಗ್ಗೆ ಸಮಾಜದಲ್ಲಿರುವ ನಿರೀಕ್ಷೆಗಳನ್ನು ಮತ್ತೊಮ್ಮೆ ಚರ್ಚೆಗೆ ತಂದಿವೆ. ನಟಿಯರ ದೈಹಿಕ ರೂಪವನ್ನು ಆಧರಿಸಿ ಟೀಕಿಸುವ ಅಥವಾ ಹೋಲಿಕೆ ಮಾಡುವ ಪ್ರವೃತ್ತಿ ತಪ್ಪಬೇಕು ಎಂದು ರಮ್ಯಾ ತಮ್ಮ ಪೋಸ್ಟ್ ಮೂಲಕ ಸಂದೇಶ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R