ಚೀನಾ ರಕ್ಷಣಾ ಸಚಿವ ಡಾಂಗ್ ಜುನ್ ಅವರನ್ನು ಭೇಟಿಯಾದ ನೇಪಾಳ ಸೇನಾ ಮುಖ್ಯಸ್ಥ ಸಿಗ್ದೆಲ್
ಕಠ್ಮಂಡು, 18 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಚೀನಾದ ಅಧಿಕೃತ ಪ್ರವಾಸದಲ್ಲಿರುವ ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಅಶೋಕರಾಜ್ ಸಿಗ್ದೆಲ್ ಅವರು ಚೀನಾ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಅವರನ್ನು ಶಿಷ್ಟಾಚಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ಪರಸ್ಪರ ಹಿತಾಸ
नेपाल और चीन के आर्मी चीफ की मुलाकात


ಕಠ್ಮಂಡು, 18 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಚೀನಾದ ಅಧಿಕೃತ ಪ್ರವಾಸದಲ್ಲಿರುವ ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಅಶೋಕರಾಜ್ ಸಿಗ್ದೆಲ್ ಅವರು ಚೀನಾ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಅವರನ್ನು ಶಿಷ್ಟಾಚಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ಪರಸ್ಪರ ಹಿತಾಸಕ್ತಿ ಹಾಗೂ ಸೇನಾ ಸಂಬಂಧಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಈ ಕುರಿತು ನೇಪಾಳ ಸೇನೆಯ ಸೈನಿಕ ಸಾರ್ವಜನಿಕ ಸಂಪರ್ಕ ಹಾಗೂ ಮಾಹಿತಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ಜನರಲ್ ಅಶೋಕರಾಜ್ ಸಿಗ್ದೆಲ್ ಅವರು ಶುಕ್ರವಾರ ಚೀನಾದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಬೀಜಿಂಗ್‌ನಲ್ಲಿ ನಡೆದ 13ನೇ ಬೀಜಿಂಗ್ ಶ್ಯಾಂಗ್‌ಶಾನ್ ವೇದಿಕೆಯ ಉದ್ಘಾಟನಾ ಅಧಿವೇಶನದಲ್ಲೂ ಅವರು ಭಾಗವಹಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande