


ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಳ್ಳಾರಿ ಜಿಲ್ಲಾ ಹಾಗೂ ತಾಲೂಕು ಘಟಕ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಮೊಹಮ್ಮದಿಯ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಹಾಗೂ ಕಾಲೇಜು ಆವರಣದಲ್ಲಿ ಉಚಿತ ಆರೋಗ್ಯ ಸೆಪ್ಟಂಬರ್ 20ರ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡರಾದ
ಮೆಹತಾಬ್, ಆಲಂಭಾಷಾ, ಎಲಿಯಾಸ್ ಭಾಷಾ, ಮೊಹಮ್ಮದ್ ರಿಜ್ವಾನ್, ಅಲ್ಲಾಬಕಾಶ್, ಶೇಕ್ಷಾವಲಿ, ದಾದಾಪೀರ್, ಮೆಹಬೂಬ್ ಭಾಷಾ, ವಜೀದ್, ಸಿರಾಜ್ ಭಾಷಾ, ಶಾಷಾವಲಿ ಸೇರಿದಂತೆ ಅನೇಕರು ಈ ಮಾಹಿತಿಯನ್ನು ನೀಡಿದರು.
ಸೆಪ್ಟಂಬರ್ 20ರ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಶಿಬಿರದಲ್ಲಿ ಜನರಲ್ ಮೆಡಿಸಿನ್, ಕಾರ್ಡಿಯಾಲಜಿ, ಆರ್ಥೋಪೆಡಿಕ್ಸ್, ನೇತ್ರ ವಿಜ್ಞಾನ, ಸ್ತ್ರೀರೋಗ ಶಾಸ್ತ್ರ, ಪಿಡಿಯಾಟ್ರಿಕ್ ಸೇರಿ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸುವರು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ತಜ್ಞರ ತಂಡವು ಶಿಬಿರದಲ್ಲಿರುತ್ತದೆ.
ಶಿಬಿರದಲ್ಲಿ ಡಯಾಬಿಟಿಸ್, ಬ್ಲಡ್ಪ್ಲೆಷರ್ ಇನ್ನಿತರೆಗಳ ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ಇರುವವರಿಗೆ ಉಚಿತವಾಗಿ
ಔಷಧಗಳನ್ನು ವಿತರಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಸೇರಿ ಎಲ್ಲಾ ಚಿಕಿತ್ಸೆಯನ್ನು ಪರಿಣಿತರು ಮತ್ತು ತಜ್ಞರಿಂದ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್