ಭಸ್ಮ ಆರತಿಯಲ್ಲಿ ಲೀನರಾದ ನಿತಿನ್ ನವೀನ್; ದೇಶದ ಸುಖ-ಸಮೃದ್ಧಿಗಾಗಿ ಮಹಾಕಾಲನಲ್ಲಿ ಪ್ರಾರ್ಥನೆ
ಉಜ್ಜಯಿನಿ, 18 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಶುಕ್ರವಾರ ಮುಂಜಾನೆ 4 ಗಂಟೆಗೆ ಮಧ್ಯಪ್ರದೇಶದ ಉಜ್ಜಯಿನಿಯ ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಾಬಾ ಮಹಾಕಾಲನ ಪ್ರಾತಃಕಾಲೀನ ಭಸ್ಮ ಆರತಿಯಲ್ಲಿ ಪಾಲ್ಗೊ
भस्म आरती में लीन दिखे भाजपा अध्यक्ष नितिन नबीन


महाकाल से मांगा देशवासियों की सुख-समृद्धि का आशीर्वाद


ಉಜ್ಜಯಿನಿ, 18 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಶುಕ್ರವಾರ ಮುಂಜಾನೆ 4 ಗಂಟೆಗೆ ಮಧ್ಯಪ್ರದೇಶದ ಉಜ್ಜಯಿನಿಯ ವಿಶ್ವಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಾಬಾ ಮಹಾಕಾಲನ ಪ್ರಾತಃಕಾಲೀನ ಭಸ್ಮ ಆರತಿಯಲ್ಲಿ ಪಾಲ್ಗೊಂಡು ದರ್ಶನ ಹಾಗೂ ಪೂಜೆ ಸಲ್ಲಿಸಿದರು.

ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಹಾಗೂ ಉಜ್ಜಯಿನಿ-ಆಲೋಟ್ ಸಂಸದ ಅನಿಲ್ ಫಿರೋಜಿಯಾ ಅವರೂ ನಿತಿನ್ ನವೀನ್ ಅವರೊಂದಿಗೆ ಇದ್ದರು. ನಿತಿನ್ ನವೀನ್ ಅವರು ಭಸ್ಮ ಆರತಿ ವೇಳೆ ನಂದಿ ಸಭಾಂಗಣದಲ್ಲಿ ಕುಳಿತು ಕೈಮುಗಿದು ಬಾಬಾ ಮಹಾಕಾಲನ ಆರಾಧನೆ ಮಾಡಿದರು. ಸುಮಾರು ಒಂದೂವರೆ ಗಂಟೆ ಆರತಿಯಲ್ಲಿ ಪಾಲ್ಗೊಂಡ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ದರ್ಶನ ಪಡೆದರು. ಹಳದಿ ಬಣ್ಣದ ಧೋತಿ ಧರಿಸಿದ್ದರು.

ಭಸ್ಮ ಆರತಿಯ ಬಳಿಕ ಬೆಳ್ಳಿಯ ದ್ವಾರದಿಂದ ಬಾಬಾ ಮಹಾಕಾಲನ ಪೂಜೆ ಸಲ್ಲಿಸಿ ಜಲಾಭಿಷೇಕ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾಕಾಲನ ಪವಿತ್ರ ನಗರಕ್ಕೆ ಆಗಮಿಸಿ ದರ್ಶನ ಹಾಗೂ ಭಸ್ಮ ಆರತಿಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಸೌಭಾಗ್ಯ ಎಂದರು. ದೇಶದ ಜನರ ಸುಖ-ಸಮೃದ್ಧಿ, ಶಾಂತಿ ಮತ್ತು ಕಲ್ಯಾಣಕ್ಕಾಗಿ ಭಗವಾನ್ ಮಹಾಕಾಲನಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಶಿಪ್ರಾ ತೀರದಲ್ಲಿ ‘ಆಶೀರ್ವಾದದ ದೀಪ’

ನಿತಿನ್ ನವೀನ್ ಅವರು ಸೆ.17 ಮತ್ತು 18ರಂದು ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ. ಗುರುವಾರ ಉಜ್ಜಯಿನಿಯಲ್ಲಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಶಿಪ್ರಾ ನದಿಯ ತೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಮಘಾಟ್‌ನಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸಿದ ಅವರು ಶಿಪ್ರಾ ಆರತಿ ಹಾಗೂ ಭಜನೆ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಬಳಿಕ ಉಜ್ಜಯಿನಿಯಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಶುಕ್ರವಾರ ಬೆಳಗ್ಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ಭಸ್ಮ ಆರತಿಯಲ್ಲಿ ಪಾಲ್ಗೊಂಡರು.

ದೇವಸ್ಥಾನ ಸಮಿತಿಯಿಂದ ಸ್ವಾಗತ

ಭಸ್ಮ ಆರತಿ ಹಾಗೂ ದರ್ಶನದ ಬಳಿಕ ಶ್ರೀ ಮಹಾಕಾಳೇಶ್ವರ ದೇವಸ್ಥಾನ ನಿರ್ವಹಣಾ ಸಮಿತಿ ವತಿಯಿಂದ ನಿತಿನ್ ನವೀನ್ ಮತ್ತು ಹೇಮಂತ್ ಖಂಡೇಲ್ವಾಲ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ರೋಷನ್ ಕುಮಾರ್ ಸಿಂಗ್ ಮತ್ತು ಆಡಳಿತಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಥಮ್ ಕೌಶಿಕ್ ಅವರು ಶಾಲು, ಶ್ರೀಫಲ ಹಾಗೂ ಬಾಬಾ ಮಹಾಕಾಲನ ಪ್ರಸಾದ ನೀಡಿ ಗೌರವಿಸಿದರು.

ವಿಶೇಷ ಅಲಂಕಾರದಲ್ಲಿ ಬಾಬಾ ಮಹಾಕಾಲ

ಶುಕ್ರವಾರ ಮುಂಜಾನೆ ದೇವಸ್ಥಾನದ ಬಾಗಿಲು ತೆರೆದ ಬಳಿಕ ಬಾಬಾ ಮಹಾಕಾಲನಿಗೆ ವಿಶೇಷ ಅಲಂಕಾರ ಮಾಡಲಾಯಿತು. ಪಂಚಾಮೃತ ಅಭಿಷೇಕ ಹಾಗೂ ಪೂಜೆ ನೆರವೇರಿಸಿದ ಬಳಿಕ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಹಣ್ಣಿನ ರಸದಿಂದ ಅಭಿಷೇಕ ಮಾಡಲಾಯಿತು. ನಂತರ ಭಾಂಗ್, ಚಂದನ ಹಾಗೂ ಆಭರಣಗಳಿಂದ ಅಲಂಕಾರ ಮಾಡಲಾಯಿತು. ಮಹಾ ನಿರ್ವಾಣಿ ಅಖಾಡದ ವತಿಯಿಂದ ಬಾಬಾ ಮಹಾಕಾಲನಿಗೆ ಭಸ್ಮ ಅರ್ಪಿಸಲಾಯಿತು.

ಭಸ್ಮ ಆರತಿಯ ಬಳಿಕ ಬಾಬಾ ಮಹಾಕಾಲನಿಗೆ ಬೆಳ್ಳಿಯ ಕಿರೀಟ, ಮುಂಡಮಾಲೆ, ರುದ್ರಾಕ್ಷಿ ಮಾಲೆ ಹಾಗೂ ಪುಷ್ಪಮಾಲೆಗಳಿಂದ ಅಲಂಕಾರ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಸ್ಮ ಆರತಿಯ ದರ್ಶನ ಪಡೆದು ನಂದಿ ಮಹಾರಾಜನ ದರ್ಶನ ಮಾಡಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸಿದರು. ಈ ವೇಳೆ ದೇವಸ್ಥಾನ ಆವರಣದಲ್ಲಿ ಬಾಬಾ ಮಹಾಕಾಲನ ಜಯಘೋಷ ಮೊಳಗಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande