ಬೆಂಗಳೂರಿನಲ್ಲಿ ರ್ಯಾಪ್ಟಿ.ಹೆಚ್ವಿ ವಾಹನಗಳ ವಿತರಣೆ ಆರಂಭ
ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಚೆನ್ನೈ ಮೂಲದ ಎಲೆಕ್ಟ್ರಿಕ್ ಮೋಟಾರ್ಸೈಕಲ್ ತಯಾರಕ ಸಂಸ್ಥೆ ರ್ಯಾಪ್ಟಿ.ಹೆಚ್ವಿ ಬೆಂಗಳೂರಿನಲ್ಲಿ ತನ್ನ ಟಿ30 ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳ ಗ್ರಾಹಕ ವಿತರಣೆಯನ್ನು ಆರಂಭಿಸಿದೆ. ಬೆಂಗಳೂರಿನಲ್ಲಿ ಅನುಭವ ಕೇಂದ್ರ ಆರಂಭಿಸಿದ ಬಳಿಕ ಇದೀಗ ಬುಕ್ಕಿಂಗ್ಗಳನ
ಬೆಂಗಳೂರಿನಲ್ಲಿ ರ್ಯಾಪ್ಟಿ.ಹೆಚ್ವಿ ವಾಹನಗಳ ವಿತರಣೆ ಆರಂಭ


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಚೆನ್ನೈ ಮೂಲದ ಎಲೆಕ್ಟ್ರಿಕ್ ಮೋಟಾರ್ಸೈಕಲ್ ತಯಾರಕ ಸಂಸ್ಥೆ ರ್ಯಾಪ್ಟಿ.ಹೆಚ್ವಿ ಬೆಂಗಳೂರಿನಲ್ಲಿ ತನ್ನ ಟಿ30 ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳ ಗ್ರಾಹಕ ವಿತರಣೆಯನ್ನು ಆರಂಭಿಸಿದೆ.

ಬೆಂಗಳೂರಿನಲ್ಲಿ ಅನುಭವ ಕೇಂದ್ರ ಆರಂಭಿಸಿದ ಬಳಿಕ ಇದೀಗ ಬುಕ್ಕಿಂಗ್ಗಳನ್ನು ಪೂರೈಸುವ ನಿಟ್ಟಿನಲ್ಲಿ ವಿತರಣಾ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಮಾರಾಟ ಹಾಗೂ ಗ್ರಾಹಕ ಸೇವಾ ವ್ಯವಸ್ಥೆಯನ್ನು ವಿಸ್ತರಿಸುತ್ತಿರುವ ಸಂಸ್ಥೆ, ನವೆಂಬರ್ ವೇಳೆಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಒಟ್ಟಾರೆ 100ಕ್ಕೂ ಹೆಚ್ಚು ಮೋಟಾರ್ಸೈಕಲ್ಗಳನ್ನು ವಿತರಿಸುವ ಗುರಿ ಹೊಂದಿದೆ.

ಗ್ರಾಹಕರ ಕಾಯುವ ಅವಧಿಯನ್ನು ಕಡಿಮೆ ಮಾಡಿ, ವಿತರಣೆಯ ಪ್ರಮಾಣ ಹೆಚ್ಚಿಸುವತ್ತ ಗಮನ ಹರಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ರ್ಯಾಪ್ಟಿ.ಹೆಚ್ವಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ 1ನೇ ಸೆಕ್ಟರ್ನಲ್ಲಿ ಪ್ರತ್ಯೇಕ ಸೇವಾ ಕೇಂದ್ರವನ್ನೂ ಸ್ಥಾಪಿಸಿದೆ. ನಾಲ್ವರು ಸಿಬ್ಬಂದಿ ಹೊಂದಿರುವ ಈ ಕೇಂದ್ರ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಮಾರಾಟೋತ್ತರ ಸೇವೆ ಒದಗಿಸಲಿದೆ.

ಸಂಸ್ಥೆಯ ಟಿ30 ಮೋಟಾರ್ಸೈಕಲ್ ಅನ್ನು HV-TEC ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, CCS2 ಸಾರ್ವಜನಿಕ ಚಾರ್ಜಿಂಗ್ ಮಾನದಂಡಕ್ಕೆ ಹೊಂದಿಕೊಳ್ಳುತ್ತದೆ. ಟಿ30 ಬೆಲೆ ₹2.39 ಲಕ್ಷ (ಎಕ್ಸ್ ಶೋರೂಂ) ಆಗಿದ್ದು, ಸಂಸ್ಥೆಯ ಪ್ರಕಾರ ಸುಮಾರು 150 ಕಿ.ಮೀ. ನೈಜ ಚಾಲನಾ ವ್ಯಾಪ್ತಿ ಹೊಂದಿದೆ.

“ಬೆಂಗಳೂರಿನಲ್ಲಿ ವಿತರಣೆಯ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಗ್ರಾಹಕರ ಕಾಯುವ ಅವಧಿಯನ್ನು ಕಡಿಮೆ ಮಾಡುವುದು ನಮ್ಮ ಪ್ರಮುಖ ಗುರಿಯಾಗಿದೆ.

ನಗರದಲ್ಲಿ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವತ್ತ ಗಮನ ಹರಿಸುತ್ತಿದ್ದೇವೆ” ಎಂದು ರ್ಯಾಪ್ಟಿ.ಹೆಚ್ವಿ ಸಿಇಒ ಹಾಗೂ ಸಹ-ಸಂಸ್ಥಾಪಕ ದಿನೇಶ್ ಅರ್ಜುನ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande