
ಕೋಲಾರ, 15 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಶಾಶ್ವತ ನೀರಾವರಿಗೆ ಒತ್ತಾಯಿಸಿ ಬೃಹತ್ ಗಣೇಶನ ಭವ್ಯ ಮೂರ್ತಿಯನ್ನು ತರಿಸಿ ಪ್ರತಿಷ್ಟಾಪಿಸಿದ್ದು, ಇಡೀ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಸಹಸ್ರಾರು ಮಂದಿ ವಿಘ್ನವಿನಾಯಕನ ದರ್ಶನ ಪಡೆದರು.
ಗಣೇಶೋತ್ಸವದ ಅಂಗವಾಗಿ ನಿತ್ಯವೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಅಖಂಡ ಭಾರತ ವಿನಾಯಕ ಮಹಾಸಭಾ ಬೃಹತ್ ಪ್ರಮಾಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಗೆದ್ದವರಿಗೆ ಭಾರಿ ಪ್ರಮಾಣದ ಗೃಹೋಪಯೋಗಿ ಸಲಕರಣೆಗಳನ್ನು ಬಹುಮಾನವಾಗಿ ನೀಡಲು ಸಿದ್ದತೆ ನಡೆಸಿದೆ.
ನಿತ್ಯವೂ ವಿಶೇಷ ಪೂಜೆ, ಸಂಜೆ ಬಂದ ಭಕ್ತರಿಗೆಲ್ಲಾ ಪ್ರಸಾದ ವಿನಿಯೋಗದ ವ್ಯವಸ್ಥೆ ಕಲ್ಪಿಸಿದ್ದು, ಗಣೇಶಚತುರ್ಥಿಯಂದು ಸಂಸದ ಮಲ್ಲೇಶಬಾಬು, ಮಾಜಿ ಸಂಸದ ಮುನಿಸ್ವಾಮಿ, ವರ್ತೂರು ಪ್ರಕಾಶ್, ಸಿಎಂಆರ್.ಶ್ರೀನಾಥ್, ಸತ್ಯನಾರಾಯಣ ಜ್ಯೂವೆರ್ಸ್ ವೆಂಕಟೇಶ್, ವೃತ್ತನಿರೀಕ್ಷಕ ಲೋಕೇಶ್, ಪ್ರವೀಣ್ ಗೌಡ, ಸಂಘ ಚಾಲಕ ಡಾ.ಶಂಕರನಾಯಕ್,ವರದೇನಹಳ್ಳಿ ವೆಂಕಟೇಶ್ ಮತ್ತಿತರರು ಭೇಟಿ ನೀಡಿ ದರ್ಶನ ಪಡೆದರು.
ಇಡೀ ಪೂಜಾ ಕಾರ್ಯಕ್ರಮ ಮತ್ತು ಪ್ರತಿಷ್ಟಾಪನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದ ತಂಡ ಕಾರ್ಯನಿರ್ವಹಿಸಿದೆ.
ಹಲವಾರು ವರ್ಷಗಳಿಂದ ಅತ್ಯಂತ ಅದ್ದೂರಿಯಾಗಿ ಹಿಂದೂ ಯುವಕರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಬಜರಂಗದಳ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಮೂಲಕ ಗಣೇಶೋತ್ಸವ ಆಚರಿಸುತ್ತಿದ್ದು, ಗಾಂಧಿವನದಲ್ಲಿ ತಿರುಪತಿ-ತಿರುಮಲ ಮಾದರಿ ದೇಗುಲ ನಿರ್ಮಿಸಿ ವಿಶೇಷ ರೀತಿಯಲ್ಲಿ ಗಣಪನನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಯಿತು. ಇಡೀ ಎಂ.ಜಿ.ರಸ್ತೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ನಿತ್ಯವೂ ಸಂಜೆ ವಿಶೇಷ ಪೂಜೆ, ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಇಡೀ ನಗರ ಮತ್ತು ವಿವಿಧೆಡೆಗಳಲ್ಲಿ ಪ್ರತಿಷ್ಟಾಪಿಸಿರುವ ಗಣಪನ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಸೆ.೧೬ ರ ಬುಧವಾರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದ್ದು, ಮೆರವಣಿಗೆಗೆ ಸಂಸದ ಮಲ್ಲೇಶಬಾಬು, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್ ಚಾಲನೆ ನೀಡಲಿದ್ದಾರೆ.
ಈ ಮೆರವಣಿಗೆಯ ನೇತೃತ್ವವನ್ನೂ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ವಹಿಸಿಕೊಂಡಿದೆ. ಈಗಾಗಲೇ ವಿವಿಧ ಸಂಘಟನೆಗಳು, ಯುವಕ ಸಂಘಗಳು, ವಿವಿಧ ಬಡಾವಣೆಗಳಲ್ಲಿಟ್ಟಿರುವ ಗಣಪನ ಮೂರ್ತಿಗಳನ್ನು ಗಾಂಧಿವನದಿAದ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.
ಭಜರಂಗದಳದ ಬಾಲಾಜಿ, ಬಾಬು, ಡಿ.ಆರ್.ನಾಗರಾಜ್, ಸತ್ಯನಾರಾಯಣ ಜ್ಯುವೆರ್ಸ್ ವೆಂಕಟೇಶ್, ಬಿಆರ್ಎಂ ಸಂತೋಷ್, ಮಂಜುನಾಥ್, ವಿಶ್ವನಾಥ್, ರವಿ, ಶ್ರೀಧರ್,ವಿಶು, ಸಾಯಿಮೌಳಿ, ದನ್ನು, ದೀಪು, ವಿಶಾಕ, ನಾಗೇಶ್, ಕನಕೇಶ್,ಭವಾನಿ, ಸಂಜಯ್,ಯಶ್ವAತ್, ವಿನಯ್,ಗೋಪಿ ಮತ್ತಿತರರು ನೇತೃತ್ವ ವಹಿಸಿದ್ದರು.
ನಗರದ ಕೋಟೆಯ ಲಕ್ಷಿö್ಮÃ ಗಣಪತಿ ದೇವಾಲಯದಲ್ಲಿ, ಕೆಇಬಿ ಕಾಲೋನಿಯ ವಿದ್ಯಾಗಣಪತಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗಣೇಶೋತ್ಸವದ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ನಗರದ ವಿವಿಧೆಡೆಗಳಲ್ಲಿ ವಿಶಿಷ್ಟ ರೀತಿಯ ಗಣಪನ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದು, ಕೆಲವುಕಡೆ ಕೃಷ್ಣವೇಷಧಾರಿ ಕೊಳಲು ಹಿಡಿದ ಗಣಪನನ್ನು ಪ್ರತಿಷ್ಟಾಪಿಸಲಾಗಿತ್ತು. ಅಯ್ಯಪ್ಪ ಸ್ವಾಮಿ ಗಣಪ, ಬಾಲಾಜಿ ರೂಪಿ ಗಣಪ, ಕಮಲದ ಮೇಲೆ ನಿಂತ ನಾಟ್ಯ ಗಣಪ,ಗೋಲ್ಡನ್ ಗಣಪ, ಕೈಲಾಸಹೊತ್ತ ಗಣಪ ಸೇರಿದಂತೆ ವಿವಿಧ ರೂಪಗಳಲ್ಲಿ ಗಣಪಗಳನ್ನು ನಗರದ ಪ್ರತಿ ಬಡಾವಣೆಯಲ್ಲೂ ಪ್ರತಿಷ್ಟಾಪಿಸಲಾಗಿದ್ದು, ಎಲ್ಲಾ ಕಡೆಗಳಲ್ಲೂ ಗಣಪ ಮೂರ್ತಿಗಳು ವೈವಿಧ್ಯತೆಯಿಂದ ಗಮನ ಸೆಳೆಯುತ್ತಿವೆ. ಕೆಲವು ಬಡಾವಣೆಯ ಯುವಕರು ಪ್ರತಿಷ್ಟಾಪಿಸಿದ ದಿನವೇ ಮೂರ್ತಿಯ ಮೆರವಣಿಗೆ ನಡೆಸಿ ಗಣೇಶ ವಿಸರ್ಜನೆ ನಡೆಸಿದರು. ಕೋಲಾರ ಜಯನಗರ ೭ನೇ ಕ್ರಾಸ್ನ ಯುವಕರು ವಿಶಿಷ್ಟ ರೀತಿಯಲ್ಲಿ ಕೇರಳದ ಕಲಾವಿದರನ್ನು ಮೆರವಣಿಗೆಯಲ್ಲಿ ಬಳಸಿಕೊಂಡಿದ್ದು ವಿಶೇಷವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್