
ಬೆಂಗಳೂರು, 14 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ನಗರದ ಪಿಂಕ್ ಲೈನ್ ಮೆಟ್ರೋ ಮಾರ್ಗದ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಅಥವಾ ‘ಬಿಸ್ಮಿಲ್ಲಾ ನಗರ–ತಾವರೆಕೆರೆ’ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯರು ಬಿಎಂಆರ್ಸಿಎಲ್ಗೆ ಮನವಿ ಸಲ್ಲಿಸಿದ್ದಾರೆ.
ಬಿಸ್ಮಿಲ್ಲಾ ನಗರದ ಸ್ಥಳೀಯ ನಿವಾಸಿಗಳು ಹಾಗೂ ಪ್ರಮುಖ ಮುಖಂಡರ ನಿಯೋಗವು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಸ್ಮಿಲ್ಲಾ ನಗರವೇ ಪ್ರಮುಖವಾಗಿ ಗುರುತಿಸಿಕೊಂಡಿದ್ದು, ಸ್ಥಳೀಯರ ಅನುಕೂಲಕ್ಕಾಗಿ ನಿಲ್ದಾಣಕ್ಕೆ ಈ ಹೆಸರು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ತಾವರೆಕೆರೆ ಮೆಟ್ರೋ ನಿಲ್ದಾಣದ ಸುತ್ತಮುತ್ತ ಬಿಸ್ಮಿಲ್ಲಾ ನಗರ ಪ್ರಮುಖ ಪ್ರದೇಶವಾಗಿದೆ. ಪ್ರತಿದಿನ ಸಾವಿರಾರು ಸ್ಥಳೀಯರು ಈ ನಿಲ್ದಾಣವನ್ನು ಬಳಸಲಿದ್ದಾರೆ.
ಆದ್ದರಿಂದ ಸ್ಥಳೀಯರ ಗುರುತಿಗಾಗಿ ‘ಬಿಸ್ಮಿಲ್ಲಾ ನಗರ’ ಅಥವಾ ‘ಬಿಸ್ಮಿಲ್ಲಾ ನಗರ–ತಾವರೆಕೆರೆ’ ಎಂಬ ಜಂಟಿ ಹೆಸರನ್ನು ಇಡಬೇಕು” ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಕಾಳೇನ ಅಗ್ರಹಾರದಿಂದ ಸಂಪರ್ಕ ಕಲ್ಪಿಸುವ ಪಿಂಕ್ ಲೈನ್ ಮೆಟ್ರೋ ಮಾರ್ಗದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R