ಹಿಂದಿ ಪ್ರಗತಿಗೆ ಇತರ ಭಾರತೀಯ ಭಾಷೆಗಳ ಗೌರವ, ಸಂರಕ್ಷಣೆ ಅಗತ್ಯ: ಅಮಿತ್ ಶಾ
ಮುಂಬೈ, 14 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಇತರ ಭಾರತೀಯ ಭಾಷೆಗಳ ಗೌರವ, ಸಂವರ್ಧನೆ ಹಾಗೂ ಸಂರಕ್ಷಣೆಯನ್ನು ಖಚಿತಪಡಿಸಿಕೊಂಡು ಹಿಂದಿ ಭಾಷೆ ಮುನ್ನಡೆಯುವುದೇ ಅದರ ಪ್ರಗತಿಯ ನಿಜವಾದ ಅರ್ಥ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವೀ ಮುಂಬೈನಲ್ಲಿ ಸೋಮವಾರ ನಡೆದ ಹಿಂದಿ ದಿನಾಚರಣೆ ಕಾರ್ಯಕ್
फोटो: नवी मुंबई में हिंदी दिवस पर आयोजित कार्यक्रम को संबोधित करते हुए केंद्रीय गृहमंत्री अमित शाह


ಮುಂಬೈ, 14 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಇತರ ಭಾರತೀಯ ಭಾಷೆಗಳ ಗೌರವ, ಸಂವರ್ಧನೆ ಹಾಗೂ ಸಂರಕ್ಷಣೆಯನ್ನು ಖಚಿತಪಡಿಸಿಕೊಂಡು ಹಿಂದಿ ಭಾಷೆ ಮುನ್ನಡೆಯುವುದೇ ಅದರ ಪ್ರಗತಿಯ ನಿಜವಾದ ಅರ್ಥ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವೀ ಮುಂಬೈನಲ್ಲಿ ಸೋಮವಾರ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಭಾಷಾ ವೈವಿಧ್ಯತೆಯನ್ನು ಭಾರತದ ಶಕ್ತಿ ಎಂದು ಬಣ್ಣಿಸಿದರು. ಭಾರತದ ಹಲವು ಭಾಷೆಗಳು ಯಾವುದೇ ದೌರ್ಬಲ್ಯದ ಸಂಕೇತವಲ್ಲ. ಬದಲಾಗಿ ಅವು ದೇಶದ ಅತಿದೊಡ್ಡ ಶಕ್ತಿಯಾಗಿವೆ. ಪ್ರತಿಯೊಂದು ಭಾರತೀಯ ಭಾಷೆಗೂ ತನ್ನದೇ ಆದ ಇತಿಹಾಸ, ಜನಪದ ಪರಂಪರೆ ಹಾಗೂ ವಿಶ್ವದೃಷ್ಟಿಕೋನವಿದ್ದು, ಇವು ಹೊಸ ಪೀಳಿಗೆಯ ಮೌಲ್ಯಗಳು ಮತ್ತು ದೃಷ್ಟಿಕೋನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಭಾಷಾ ವೈವಿಧ್ಯತೆ ದೇಶದ ‘ವೈವಿಧ್ಯತೆಯಲ್ಲಿ ಏಕತೆ’ಯ ಭಾವನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಒಂದು ಸಮಾಜದ ಸ್ಮೃತಿ ಮತ್ತು ಆತ್ಮಪ್ರಜ್ಞೆಯೂ ಆಗಿದೆ. ವಿವಿಧ ವರ್ಗಗಳು ಹಾಗೂ ಸಮುದಾಯಗಳನ್ನು ಸಂಪರ್ಕಿಸುವ, ಸಂವಹನ ಮತ್ತು ಸಮನ್ವಯದ ಭಾಷೆಯಾಗಿ ಹಿಂದಿ ಮಹತ್ವದ ಪಾತ್ರ ವಹಿಸಿದೆ ಎಂದು ಅಮಿತ್ ಶಾ ಹೇಳಿದರು.

“ಇತರ ಭಾರತೀಯ ಭಾಷೆಗಳ ಗೌರವ, ಸಂವರ್ಧನೆ ಮತ್ತು ಸಂರಕ್ಷಣೆಯನ್ನು ಖಚಿತಪಡಿಸಿಕೊಂಡು ಹಿಂದಿ ಮುನ್ನಡೆದಾಗ ಮಾತ್ರ ಅದರ ಪ್ರಗತಿ ಸಾರ್ಥಕವಾಗಲಿದೆ” ಎಂದು ಅವರು ಹೇಳಿದರು.

ಹಿಂದಿಯನ್ನು ಯಾವುದೇ ಒಂದು ಭಾಷೆಯ ಪ್ರತಿನಿಧಿಯಾಗಿ ನೋಡಬಾರದು. ದೇಶದ ವಿವಿಧ ಭಾಷೆಗಳು ಹಾಗೂ ರಾಷ್ಟ್ರೀಯ ಏಕತೆಯ ನಡುವಿನ ಪ್ರಮುಖ ಕೊಂಡಿಯಾಗಿ ಹಿಂದಿಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಗುಜರಾತಿ ತಮ್ಮ ಮಾತೃಭಾಷೆಯಾಗಿದ್ದರೂ, ದೇಶದ ವಿವಿಧ ಭಾಗಗಳ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಹಿಂದಿ ಸಹಕಾರಿಯಾಗಿದೆ ಎಂದು ಅಮಿತ್ ಶಾ ಹೇಳಿದರು. ಯುವಜನರು ತಮ್ಮ ಮಾತೃಭಾಷೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದರ ಜೊತೆಗೆ ಜಗತ್ತಿನಿಂದ ಕಲಿಯಬೇಕು ಎಂದು ಕರೆ ನೀಡಿದರು. ಮಕ್ಕಳೊಂದಿಗೆ ಪೋಷಕರು ತಮ್ಮ ಮಾತೃಭಾಷೆಯಲ್ಲೇ ಸಂವಾದ ನಡೆಸಬೇಕು ಎಂದು ಮನವಿ ಮಾಡಿದರು.

“ನಮ್ಮ ಮಾತೃಭೂಮಿ, ನಮ್ಮ ಮಣ್ಣು, ನಮ್ಮ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯೊಂದಿಗೆ ನಮ್ಮನ್ನು ಸಂಪರ್ಕಿಸುವ ಮಾಧ್ಯಮವೇ ಭಾಷೆ” ಎಂದು ಅವರು ಹೇಳಿದರು.

ಸೆಪ್ಟೆಂಬರ್ 14ರಂದು ಹಿಂದಿ ದಿನ

1949ರ ಸೆಪ್ಟೆಂಬರ್ 14ರಂದು ಸಂವಿಧಾನ ಸಭೆಯು ಹಿಂದಿಯನ್ನು ಒಕ್ಕೂಟದ ರಾಜಭಾಷೆಯಾಗಿ ಅಂಗೀಕರಿಸಿತ್ತು. ಇದರ ಸ್ಮರಣಾರ್ಥ ಪ್ರತಿವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿನವನ್ನು ಆಚರಿಸಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande