5 ಲೆವೆಲ್ ಕ್ರಾಸಿಂಗ್ ತೆರವಿಗೆ ಕೆ–ರೈಡ್ ಟೆಂಡರ್
ಕೆ–ರೈಡ್ ಟೆಂಡರ್
5 ಲೆವೆಲ್ ಕ್ರಾಸಿಂಗ್ ತೆರವಿಗೆ ಕೆ–ರೈಡ್ ಟೆಂಡರ್


ಬೆಂಗಳೂರು, 14 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ನಗರದ ಉಪನಗರ ರೈಲು ಯೋಜನೆಯ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ಐದು ಲೆವೆಲ್ ಕ್ರಾಸಿಂಗ್ಗಳನ್ನು ತೆರವುಗೊಳಿಸುವ ಕಾಮಗಾರಿಗೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ–ರೈಡ್) ಟೆಂಡರ್ ಕರೆದಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ ನಾಲ್ಕನೇ ಕಾರಿಡಾರ್ಗೆ ಸಂಬಂಧಿಸಿದಂತೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ರೈಲು ಮಾರ್ಗ ಮತ್ತು ರಸ್ತೆ ಸಂಚಾರವನ್ನು ಪ್ರತ್ಯೇಕಿಸುವ ಮೂಲಕ ಅಪಘಾತಗಳ ಸಾಧ್ಯತೆ ಕಡಿಮೆ ಮಾಡುವುದು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ.

ಲೆವೆಲ್ ಕ್ರಾಸಿಂಗ್ಗಳ ತೆರವುಗೊಳಿಸುವ ಕಾಮಗಾರಿಯಲ್ಲಿ ಅಗತ್ಯವಿರುವ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ಸೇರಿದಂತೆ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶವಿದೆ.

ಇದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗದೆ ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ.

ಕೆ–ರೈಡ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯಿದೆ ಉಪನಗರ ರೈಲು ಯೋಜನೆಯ ಅನುಷ್ಠಾನದ ಭಾಗವಾಗಿ ಲೆವೆಲ್ ಕ್ರಾಸಿಂಗ್ಗಳ ತೆರವು ಪ್ರಮುಖ ಹೆಜ್ಜೆಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande