ಬೀದರ್ ನಲ್ಲಿ ಅಯೋಧ್ಯೆ ರಾಮಮಂದಿರ ಮಾದರಿ ಗಣೇಶ ಮಂಟಪ
ಅಯೋಧ್ಯೆ ರಾಮಮಂದಿರ ಮಾದರಿ ಗಣೇಶ ಮಂಟಪ
Bidar-Ayodhya-Ram-Mandir-Model-Ganesh-Mantap-at-Mailur-Cross


ಬೀದರ್, 14 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ಮೈಲೂರು ಕ್ರಾಸ್ ಸಮೀಪ ಈ ಬಾರಿಯ ಗಣೇಶೋತ್ಸವದ ಅಂಗವಾಗಿ ಅಯೋಧ್ಯೆಯ ರಾಮಮಂದಿರದ ಮಾದರಿಯಲ್ಲಿ ಭವ್ಯ ಗಣೇಶ ಮಂಟಪ ನಿರ್ಮಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ರಾಮಮಂದಿರದ ಗೋಪುರದ ಮಾದರಿಯಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು,

ಅಯೋಧ್ಯೆ ರಾಮಮಂದಿರದ ಹೋರಾಟದಿಂದ ಹಿಡಿದು ಮಂದಿರ ನಿರ್ಮಾಣದವರೆಗಿನ ಪ್ರಮುಖ ಘಟನೆಗಳ ಇತಿಹಾಸವನ್ನು ಫ್ಲೆಕ್ಸ್ಗಳ ಮೂಲಕ ಪ್ರದರ್ಶಿಸಲಾಗಿದೆ.

‘ಗಣೇಶೋತ್ಸವದ ಜತೆಗೆ ಅಯೋಧ್ಯೆ ರಾಮಮಂದಿರದ ಇತಿಹಾಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಮಂಟಪ ನಿರ್ಮಿಸಲಾಗಿದೆ.

ಅಯೋಧ್ಯೆಗೆ ತೆರಳಿ ರಾಮಮಂದಿರವನ್ನು ವೀಕ್ಷಿಸಲು ಸಾಧ್ಯವಾಗದ ಭಕ್ತರಿಗೆ ಬೀದರ್ ನಲ್ಲಿ ಅದರ ಮಾದರಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ’ ಎಂದು ಆಯೋಜಕರು ತಿಳಿಸಿದ್ದಾರೆ.

ಭಕ್ತಿ, ಇತಿಹಾಸ ಮತ್ತು ಸಂಸ್ಕೃತಿಯ ಸಂಗಮವಾಗಿ ರೂಪುಗೊಂಡಿರುವ ಈ ಮಂಟಪವನ್ನು ವೀಕ್ಷಿಸಲು ಮೈಲೂರು ಕ್ರಾಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.

ಇದರೊಂದಿಗೆ ಪ್ರತಿದಿನ ಸಂಜೆ 6ರಿಂದ 7 ಗಂಟೆಯವರೆಗೆ ಗಂಗಾ ಆರತಿ ಆಯೋಜಿಸಲಾಗಿದೆ.

ವಾರಣಾಸಿಯಿಂದ ಆಗಮಿಸಿರುವ ಐವರು ಆಚಾರ್ಯರು ಆರತಿ ನೆರವೇರಿಸಲಿದ್ದಾರೆ. ಗಂಗಾ ಆರತಿ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 16ರಂದು ಶ್ಯಾಮ್ ಭಜನೆ ಹಾಗೂ ಸೆಪ್ಟೆಂಬರ್ 17ರಂದು ರಾಮ್ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಂಟಪವು ಭಕ್ತರು ಮತ್ತು ಸಾರ್ವಜನಿಕರಿಗೆ ವಿಶೇಷ ಆಕರ್ಷಣೆಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande