ಹೋರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ: ಎಚ್ಚರಿಕೆ ನೀಡಿದ ಯುಕೆಎಂಟಿಒ
ಟೆಹ್ರಾನ್, 13 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದ್ದು, ಈ ಮಾರ್ಗವಾಗಿ ಸಾಗುತ್ತಿದ್ದ ಹಡಗೊಂದರ ಮೇಲೆ ಅಪರಿಚಿತ ಉತ್ಕ್ಷೇಪಕ ದಾಳಿ ನಡೆಸಿರುವ ಘಟನೆ ನಡೆದಿದೆ. ಸೆ.12ರಂದು ನಡೆದಿರುವ ಈ ಘಟನೆಯ ಕುರಿತು ಯುನೈಟೆಡ್ ಕಿಂಗ್‌ಡಮ್ ಮ್ಯಾ
यूनाइटेड किंगडम मैरीटाइम ट्रेड ऑपरेशंस की एक्स पोस्ट।


ಟೆಹ್ರಾನ್, 13 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದ್ದು, ಈ ಮಾರ್ಗವಾಗಿ ಸಾಗುತ್ತಿದ್ದ ಹಡಗೊಂದರ ಮೇಲೆ ಅಪರಿಚಿತ ಉತ್ಕ್ಷೇಪಕ ದಾಳಿ ನಡೆಸಿರುವ ಘಟನೆ ನಡೆದಿದೆ. ಸೆ.12ರಂದು ನಡೆದಿರುವ ಈ ಘಟನೆಯ ಕುರಿತು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ಎಚ್ಚರಿಕೆ ಹೊರಡಿಸಿದೆ.

ಯುಕೆಎಂಟಿಒ ತನ್ನ ‘ಎಕ್ಸ್’ ಖಾತೆಯಲ್ಲಿ ಬಿಡುಗಡೆ ಮಾಡಿರುವ 134-26 ಸಂಖ್ಯೆಯ ಎಚ್ಚರಿಕೆ ಪ್ರಕಾರ, ಸೆ.12ರಂದು ರಾತ್ರಿ 11 ಗಂಟೆಗೆ (ಯುಟಿಸಿ) ಹಡಗಿನ ಮೇಲೆ ಅಪರಿಚಿತ ಉತ್ಕ್ಷೇಪಕ ದಾಳಿ ನಡೆದಿರುವ ಮಾಹಿತಿ ಲಭಿಸಿದೆ. ಘಟನೆ ಬಳಿಕ ಭದ್ರತಾ ಸಂಸ್ಥೆಗಳು ಎಚ್ಚರಗೊಂಡಿದ್ದು, ಪರಿಸ್ಥಿತಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಆರಂಭಿಕ ವರದಿಗಳ ಪ್ರಕಾರ, ಹಡಗಿನಲ್ಲಿದ್ದ ಸಿಬ್ಬಂದಿಯ ಸ್ಥಿತಿ, ಹಡಗಿಗೆ ಉಂಟಾಗಿರುವ ಹಾನಿಯ ಪ್ರಮಾಣ ಹಾಗೂ ಪರಿಸರದ ಮೇಲೆ ಬೀರಿರುವ ಪರಿಣಾಮದ ಕುರಿತು ತಕ್ಷಣಕ್ಕೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ ಪರಿಸ್ಥಿತಿಯ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ಯುಕೆಎಂಟಿಒ ತಿಳಿಸಿದೆ.

ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಹೋರ್ಮುಜ್ ಜಲಸಂಧಿ ಹಾಗೂ ಸುತ್ತಮುತ್ತಲಿನ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಎಲ್ಲ ಹಡಗುಗಳು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಯುಕೆಎಂಟಿಒ ಸೂಚಿಸಿದೆ. ಅಲ್ಲದೆ, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande