ಬ್ರಿಕ್ಸ್ ಶೃಂಗಸಭೆಯ ಎರಡನೇ ದಿನ: ಭಾರತ ಮಂಟಪಕ್ಕೆ ಪ್ರಧಾನಿ ಮೋದಿ ಆಗಮನ
ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆ-2026ರ ಎರಡನೇ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಂಟಪಕ್ಕೆ ಆಗಮಿಸಿದರು. ಭಾರತ ಮಂಟಪದಲ್ಲೇ ಬ್ರಿಕ್ಸ್ ಶೃಂಗಸಭೆಯ ಪ್ರಮುಖ ಕಾರ್ಯಕ್ರಮ
18वें ब्रिक्स समिट के दूसरे दिन भारत मंडपम पहुंचे प्रधानमंत्री नरेन्द्र मोदी


ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆ-2026ರ ಎರಡನೇ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಂಟಪಕ್ಕೆ ಆಗಮಿಸಿದರು. ಭಾರತ ಮಂಟಪದಲ್ಲೇ ಬ್ರಿಕ್ಸ್ ಶೃಂಗಸಭೆಯ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿವೆ.

ಶೃಂಗಸಭೆಯ ಮೊದಲ ದಿನ ನವ ದೆಹಲಿ ಘೋಷಣಾಪತ್ರವನ್ನು ಅಂಗೀಕರಿಸುವುದರ ಜೊತೆಗೆ ಭಾರತ ಮತ್ತು ಚೀನಾ ನಡುವೆ ಮಹತ್ವದ ದ್ವಿಪಕ್ಷೀಯ ಸಭೆಯೂ ನಡೆದಿತ್ತು. ಇದರ ಬೆನ್ನಲ್ಲೇ ಎರಡನೇ ದಿನದ ಕಾರ್ಯಕ್ರಮಗಳು ಆರಂಭಗೊಂಡಿವೆ.

ಜಾಗತಿಕ ಸಮುದಾಯಕ್ಕೆ ಮಹತ್ವದ ಆದ್ಯತೆಗಳ ಕುರಿತು ಬಲಿಷ್ಠ ಪಾಲುದಾರಿಕೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳು ಚರ್ಚೆ ನಡೆಸಲಿವೆ. ಭಾನುವಾರ ಎಲ್ಲ ರಾಷ್ಟ್ರಗಳ ಮುಖ್ಯಸ್ಥರು ಮುಕ್ತ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಬ್ರಿಕ್ಸ್ ಶೃಂಗಸಭೆಯ ಪ್ರಮುಖ ನಾಲ್ಕು ಆಧಾರಸ್ತಂಭಗಳಾದ ಸ್ಥಿತಿಸ್ಥಾಪಕತೆ, ನವೋದ್ಯಮ, ಸಹಕಾರ ಮತ್ತು ಸ್ಥಿರತೆಗೆ ಇಂದಿನ ಅಧಿವೇಶನದಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಅಧಿವೇಶನದಲ್ಲಿ ಬ್ರಿಕ್ಸ್ ನಾಯಕರು ಪರಸ್ಪರ ಸಾಮಾನ್ಯ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ.

ಜಾಗತಿಕ ಅಭಿವೃದ್ಧಿಗೆ ಎಲ್ಲರನ್ನೂ ಒಳಗೊಂಡ ಸಮಗ್ರ ದೃಷ್ಟಿಕೋನವನ್ನು ಮುಂದುವರಿಸುವ ಕುರಿತಾಗಿಯೂ ಬ್ರಿಕ್ಸ್ ರಾಷ್ಟ್ರಗಳ ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande