
ಬೆಂಗಳೂರು, 13 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ 42 ಕೆರೆ ಅಂಗಳದ ಹಾಗೂ ತಾತ್ಕಾಲಿಕ ಕಲ್ಯಾಣಿಗಳು ಮತ್ತು 659 ಮೊಬೈಲ್ ಟ್ಯಾಂಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ವಾರ್ಡ್‌ವಾರು ಮೊಬೈಲ್ ಟ್ಯಾಂಕ್‌ಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಸಮೀಪದ ವಿಸರ್ಜನಾ ಸ್ಥಳಗಳನ್ನು ಬಳಸಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೇ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿಗಳನ್ನು ಪಡೆಯಲು 122 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೇಂದ್ರಗಳ ವಿವರ ಹೀಗಿದೆ:
ಪಶ್ಚಿಮ ನಗರ ಪಾಲಿಕೆ: 22
ಕೇಂದ್ರ ನಗರ ಪಾಲಿಕೆ: 24
ಪೂರ್ವ ನಗರ ಪಾಲಿಕೆ: 17
ಉತ್ತರ ನಗರ ಪಾಲಿಕೆ: 30
ದಕ್ಷಿಣ ನಗರ ಪಾಲಿಕೆ: 29
ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕ್‌ಗಳು, ಏಕಗವಾಕ್ಷಿ ಕೇಂದ್ರಗಳು ಹಾಗೂ ಸಂಬಂಧಿತ ವ್ಯವಸ್ಥೆಗಳ ಸಂಪೂರ್ಣ ಮಾಹಿತಿಯನ್ನು ‘ಗಣೇಶ ವಿಸರ್ಜನೆ ಮಾಹಿತಿ’ ಜಾಲತಾಣದ ಮೂಲಕ ಪಡೆಯಬಹುದಾಗಿದೆ. ಸಾರ್ವಜನಿಕರು ಜಿಬಿಎ ಜಾಲತಾಣದಲ್ಲಿರುವ ಗಣೇಶ ವಿಸರ್ಜನೆ ವಿಭಾಗದ ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.
ಗಣೇಶ ಚತುರ್ಥಿಯನ್ನು ಸುರಕ್ಷಿತ, ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.