ಡಿಕೆಶಿ ಆಡಳಿತಕ್ಕೆ ಅಶೋಕ್ ಟೀಕೆ: 100 ದಿನಗಳ ಸಾಧನೆ ಶೂನ್ಯ
100 ದಿನಗಳ ಸಾಧನೆ ಎಂದರೆ ಮೊದಲ ವಿಕೆಟ್ ಪತನ’
ಡಿಕೆಶಿ ಆಡಳಿತಕ್ಕೆ ಅಶೋಕ್ ಟೀಕೆ: 100 ದಿನಗಳ ಸಾಧನೆ ಶೂನ್ಯ


ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ 100 ದಿನಗಳ ಸಾಧನೆ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಸರ್ಕಾರದ 100 ದಿನಗಳ ಸಾಧನೆ ಎಂದರೆ ‘ಮೊದಲ ವಿಕೆಟ್ ಬಿದ್ದಿರುವುದು’ ಎಂದು ಅವರು ಹೇಳಿದ್ದಾರೆ.ಸರ್ಕಾರದ ಕಾರ್ಯವೈಖರಿ ಹಾಗೂ ಆಡಳಿತದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅಶೋಕ್, ಕಾಂಗ್ರೆಸ್ ಸರ್ಕಾರದೊಳಗಿನ ಬೆಳವಣಿಗೆಗಳನ್ನು ಗಮನಿಸಿದರೆ ಜನರಿಗೆ ನಿರೀಕ್ಷಿತ ಆಡಳಿತ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್ ಅವರ ಆಡಳಿತದ 100 ದಿನಗಳನ್ನು ಸರ್ಕಾರದ ಸಾಧನೆಯಾಗಿ ಬಿಂಬಿಸುವುದಕ್ಕಿಂತ, ಕಾಂಗ್ರೆಸ್ನ ಆಂತರಿಕ ಬೆಳವಣಿಗೆಗಳು ಹಾಗೂ ರಾಜಕೀಯ ಗೊಂದಲಗಳತ್ತ ಗಮನ ಹರಿಸುವಂತಾಗಿದೆ ಎಂದು ಅವರು ಟೀಕಿಸಿದರು.

ಸರ್ಕಾರ ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ ಆಡಳಿತ ನಡೆಸಬೇಕು. ಆದರೆ, ಕಾಂಗ್ರೆಸ್ನೊಳಗಿನ ರಾಜಕೀಯ ಬೆಳವಣಿಗೆಗಳೇ ಹೆಚ್ಚು ಚರ್ಚೆಯಾಗುತ್ತಿವೆ ಎಂದು ಅಶೋಕ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande