ವಂದೇ ಮಾತರಂಗೆ ರಾಜಕೀಯ ಲೆಕ್ಕಾಚಾರದ ಬಣ್ಣವೇಕೆ: ವಿಜಯೇಂದ್ರ
ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ವೋಟ್ ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ವಂದೇ ಮಾತರಂ ವಿಚಾರದಲ್ಲೂ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.
ವಿಜಯೇಂದ್ರ ಸಂಗ್ರಹ ಪೋಟೋ


ಬೆಂಗಳೂರು, 11 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ವೋಟ್ ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ವಂದೇ ಮಾತರಂ ವಿಚಾರದಲ್ಲೂ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಆದೇಶಿಸಿದೆ. ಆದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಂಪೂರ್ಣ ವಂದೇ ಮಾತರಂ ಗಾಯನಕ್ಕೆ ಅವಕಾಶ ನೀಡಲಾಗಿದೆ ಎಂದು ಟೀಕಿಸಿದ್ದಾರೆ.

ಸರ್ಕಾರವು ಈ ನಿರ್ಧಾರವನ್ನು ‘ಏಕರೂಪತೆ, ಗೌರವ ಹಾಗೂ ಸೂಕ್ತ ಶಿಷ್ಟಾಚಾರ’ದ ಉದ್ದೇಶದಿಂದ ಕೈಗೊಂಡಿದೆ ಎಂದು ಹೇಳಿಕೊಂಡಿದೆ. ಆದರೆ ಗಣ್ಯರು ಭಾಗವಹಿಸಿದಾಗ ಸಂಪೂರ್ಣ ವಂದೇ ಮಾತರಂಗೆ ಗೌರವ ನೀಡಬಹುದಾದರೆ, ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮದಲ್ಲೂ ಅದೇ ಗೌರವ ನೀಡಲು ಏಕೆ ಸಾಧ್ಯವಿಲ್ಲ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ವೇದಿಕೆಯಲ್ಲಿರುವ ಗಣ್ಯರ ಆಧಾರದ ಮೇಲೆ ರಾಷ್ಟ್ರಗೀತೆಯ ಗೌರವ ನಿರ್ಧಾರವಾಗಬೇಕೇ? ಕೇಂದ್ರ ಸರ್ಕಾರ ಈಗಾಗಲೇ ವಂದೇ ಮಾತರಂನ ಅಧಿಕೃತ ಆರು ಚರಣಗಳ ಆವೃತ್ತಿಯನ್ನು ಅಧಿಸೂಚನೆ ಮಾಡಿದೆ. ವಂದೇ ಮಾತರಂನ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಪ್ರತ್ಯೇಕ ಹಾಗೂ ನಿರ್ಬಂಧಿತ ಶಿಷ್ಟಾಚಾರ ರೂಪಿಸಿರುವುದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಹಾಗೂ ದೇಶದ ಸಾಮೂಹಿಕ ರಾಷ್ಟ್ರೀಯ ಅಸ್ಮಿತೆಯನ್ನು ಪ್ರತಿನಿಧಿಸುವ ಗೀತೆಯನ್ನು ರಾಜಕೀಯ ಲೆಕ್ಕಾಚಾರದ ವಸ್ತುವನ್ನಾಗಿ ಮಾಡಬಾರದು ಎಂದು ವಿಜಯೇಂದ್ರ ಹೇಳಿದ್ದಾರೆ.

ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಿತಿ ಇರಬೇಕು. ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರಗೀತೆಯ ಮೇಲಿನ ಗೌರವವು ರಾಜಕೀಯ ಲಾಭ-ನಷ್ಟ ಹಾಗೂ ಪಕ್ಷೀಯ ಒತ್ತಡಗಳಿಗಿಂತ ಮೇಲಿರಬೇಕು. ವಂದೇ ಮಾತರಂ ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದು, ಯಾವುದೇ ಷರತ್ತು, ವರ್ಗೀಕರಣ ಅಥವಾ ರಾಜಕೀಯ ಅನುಕೂಲಕ್ಕೆ ಒಳಪಡಿಸದೆ ಅದಕ್ಕೆ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande