ದರೂರು : ತೇರುಮನೆ ಸೇರಿದ ವೀರಭದ್ರಸ್ವಾಮಿಯ ರಥ
ಸಿರುಗುಪ್ಪ, 11 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ನಾಡಿನ ಪ್ರಸಿದ್ಧ ದರೂರು ಶ್ರೀ ವೀರಭದ್ರಸ್ವಾಮಿಯ ರಥೋತ್ಸವದ ನಂತರ ರಥವವು ಗುರುವಾರಕ್ಕೆ ಪೂರ್ಣಗೊಂಡಿದ್ದು, ಶುಕ್ರವಾರ ಬೆಳಗ್ಗೆ ತೇರನ್ನು `ತೇರುಮನೆ''ಗೆ ಕಳುಹಿಸಲಾಯಿತು. ಸಿರುಗುಪ್ಪ ತಾಲೂಕಿನ ದರೂರು ಶ್ರೀ ವೀರಭದ್ರಸ್ವಾಮಿ ಪುಣ್ಯಕ್ಷೇತ್ರದ ರಥ
ದರೂರು : ತೇರುಮನೆ ಸೇರಿದ ವೀರಭದ್ರಸ್ವಾಮಿಯ ರಥ


ಸಿರುಗುಪ್ಪ, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ನಾಡಿನ ಪ್ರಸಿದ್ಧ ದರೂರು ಶ್ರೀ ವೀರಭದ್ರಸ್ವಾಮಿಯ ರಥೋತ್ಸವದ ನಂತರ ರಥವವು ಗುರುವಾರಕ್ಕೆ ಪೂರ್ಣಗೊಂಡಿದ್ದು, ಶುಕ್ರವಾರ ಬೆಳಗ್ಗೆ ತೇರನ್ನು `ತೇರುಮನೆ'ಗೆ ಕಳುಹಿಸಲಾಯಿತು.

ಸಿರುಗುಪ್ಪ ತಾಲೂಕಿನ ದರೂರು ಶ್ರೀ ವೀರಭದ್ರಸ್ವಾಮಿ ಪುಣ್ಯಕ್ಷೇತ್ರದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಸೆಪ್ಟಂಬರ್ 7.9.2026 ರಿಂದ 10.9.2026 ರ ವರೆಗೆ ಲಕ್ಷಾಂತರ

ಭಕ್ತರ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ಬೆಳಗ್ಗೆ ಪುಣ್ಯಕ್ಷೇತ್ರದ ಆಯಗಾರರು, ಮೇಟಿಯವರು, ತಳವಾರರು ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಒಗ್ಗೂಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೀರೇಶಯ್ಯ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಥಕ್ಕೆ ಪೂಜೆಯನ್ನು ನೆರವೇರಿಸಿ, ತೇರಿನ ಕಳಸ ಮತ್ತು ತೇರಿನಲ್ಲಿದ್ದ ದೇವರ ಮೂರ್ತಿಯನ್ನು ತೆಗೆದು, ಭಕ್ತಾಧಿಗಳು ರಥಕ್ಕೆ ಹಾಕಿದ್ದ ಹೂವಿನ ಹಾರಗಳು, ಬಾಳೆದಿಂಬುಗಳನ್ನು ತೆಗೆದು ಸ್ವಚ್ಛಗೊಳಿಸಿ ತೇರಿನ ಮನೆಗೆ ಬಿಡಲಾಯಿತು.

ಪ್ರತೀ ವರ್ಷ ಶ್ರಾವಣ ಮಾಸದ ಮೊದಲನೆಯ ಸೋಮವಾರದಿಂದ ಆರಂಭಗೊಳ್ಳುವ ಜಾತ್ರಾ ಮಹೋತ್ಸವವು ಶ್ರಾವಣದ ಕೊನೆಯ ದಿನ (ಅಮವಾಸ್ಯೆ) ಸಮಾರೋಪಗೊಳ್ಳಲಿವೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದರೂರು ಡಾ. ಪುರುಷೋತ್ತಮ ಗೌಡ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande