
ಕೋಲಾರ, 11 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಶ್ರಾವಣ ಮಾಸದ ಕೊನೆಯ ದಿನದಂದು ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರ ಗ್ರಾಮದ ನಾಗಲಾಪುರ ಮಠದ ಶ್ರೀಗಳಿಂದ ಇಷ್ಟಲಿಂಗ ಶಿವಪೂಜೆಯೊಂದಿಗೆ ೧೪ನೇ ವರ್ಷದ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧರ್ಮ ಜಾಗೃತಿ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು.
ಶ್ರೀಮದ್ ರಂಬಾಪುರಿ ಪೀಠದ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವಶಾಂತಿ, ಲೋಕಕಲ್ಯಾಣಾರ್ಥವಾಗಿ ಪರಾಭವ ನಾಮ ಸಂವತ್ಸರ ಶ್ರಾವಣ ಮಾಸದ ಮನೆ ಮನೆಗಳಲ್ಲಿ ಶ್ರಾವಣ ಶಿವಸಂಜೆ, ಮಹಾ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕೊನೆಯ ದಿನ ಗುರುವಾರದಂದು ಸಂಜೆ ನಾಗಲಾಪುರದ ಮಠದಲ್ಲಿ ಇಷ್ಟ ಲಿಂಗ ಮಹಾ ಪೂಜಾ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು.
ಶ್ರಾವಣ ಶಿವಸಂಜೆ ಶಿವಾನುಭವ ಕೊನೆಯ ದಿನದ ಕಾರ್ಯಕ್ರಮದಲ್ಲಿ ನಾಗಲಾಪುರ ಮಠಾಧ್ಯಕ್ಷರಾದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯ ವಹಿಸಿ, ಆರ್ಶೀವಚನ ನೀಡಿದರು. ಇದೇ ಸಂದರ್ಭದಲ್ಲಿ ಹಲವು ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಿ, ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದರು.
ನಾಗಲಾಪುರ ಮಠದಲ್ಲಿ ಶ್ತಾವಣ ಮಾಸದ ಕೊನೆಯ ದಿನದ ವಿಶೇಷ ಪೂಜೆ ಮತ್ತು ದಾಸೋಹದ ವ್ಯವಸ್ಥೆಯನ್ನು ಕಾಳಪ್ಪನಹಳ್ಳಿಯ ಕೆ.ಆರ್. ಷಡಕ್ಷರಿ ಶಾಸ್ತಿಗಳು ಮಾಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್