ರಷ್ಯಾ ಪುಟಿನ್ ಭಾರತಕ್ಕೆ ಆಗಮನ: ಇಂದು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ
ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ ಅವರ ವಿಮಾನ ನವದೆಹಲಿಗೆ ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಕೆ.ವಿ.
रूस के राष्ट्रपति व्लादिमीर पुतिन नई दिल्ली में। वो रात को तीन बजे पहुंचे। फोटो ग्रैबः इंटरनेट मीडिया


ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಗೆ ಅವರ ವಿಮಾನ ನವದೆಹಲಿಗೆ ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಕೆ.ವಿ. ಸಿಂಗ್ ಅವರು ಪುಟಿನ್ ಅವರನ್ನು ಸ್ವಾಗತಿಸಿದರು. ಕೆಂಪು ಹಾಸಿನ ಸ್ವಾಗತ ಹಾಗೂ ಗೌರವ ವಂದನೆ ಬಳಿಕ ಪುಟಿನ್ ಅವರ ವಾಹನಗಳ ಬೆಂಗಾವಲು ಪಡೆ ವಿಮಾನ ನಿಲ್ದಾಣದಿಂದ ಹೊರಟಿತು.

ಪುಟಿನ್ ಅವರು ರಾಷ್ಟ್ರ ರಾಜಧಾನಿಯ ಮೌರ್ಯ ಶೆರಟನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯಲ್ಲಿ ಸು-57 ಯುದ್ಧವಿಮಾನ, ನವೀಕೃತ ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ ಹಲವು ರಕ್ಷಣಾ ಸಹಕಾರ ಒಪ್ಪಂದಗಳ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

2022ರ ಫೆಬ್ರವರಿಯಲ್ಲಿ ಉಕ್ರೇನ್ ಯುದ್ಧ ಆರಂಭವಾದ ಬಳಿಕ ರಷ್ಯಾದ ಹೊರಗೆ ನಡೆಯುತ್ತಿರುವ ಜಾಗತಿಕ ಮಟ್ಟದ ಪ್ರಮುಖ ಕಾರ್ಯಕ್ರಮದಲ್ಲಿ ಪುಟಿನ್ ಅವರು ವೈಯಕ್ತಿಕವಾಗಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುತ್ತಿರುವ ವಿವಿಧ ರಾಷ್ಟ್ರಗಳ ನಾಯಕರು ಕೂಡ ಪ್ರಧಾನಿ ಮೋದಿ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಈ ನಡುವೆ, ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರ ಭಾರತ ಭೇಟಿ ಹಾಗೂ ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆಯ ಫಲಿತಾಂಶಗಳ ಮೇಲೂ ಜಾಗತಿಕ ಗಮನ ನೆಟ್ಟಿದೆ. ಪಶ್ಚಿಮ ಏಷ್ಯಾದಲ್ಲಿನ ಅಸ್ಥಿರ ಪರಿಸ್ಥಿತಿ ಮತ್ತು ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕ ಸವಾಲುಗಳ ನಡುವೆಯೇ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರದ ಮೇಲೂ ಈ ಮಾತುಕತೆಗಳು ಪರಿಣಾಮ ಬೀರುವ ಸಾಧ್ಯತೆಯಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಿಧ ನಿರ್ಧಾರಗಳಿಂದಾಗಿ ಹಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಆತಂಕದ ನಡುವೆ, ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗಬೇಕು ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ. ಹೀಗಾಗಿ ಮೋದಿ-ಶಿ ಹಾಗೂ ಮೋದಿ-ಪುಟಿನ್ ಮಾತುಕತೆಗಳತ್ತ ಜಗತ್ತಿನ ಗಮನ ಹರಿದಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೊವ್ ಹಾಗೂ ಪ್ರಥಮ ಉಪ ಪ್ರಧಾನಮಂತ್ರಿ ಡೆನಿಸ್ ಮಂತುರೊವ್ ಕೂಡ ಈಗಾಗಲೇ ನವದೆಹಲಿಗೆ ಆಗಮಿಸಿದ್ದಾರೆ. ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಸೆ.12ರ ಮಧ್ಯಾಹ್ನ ದೆಹಲಿಗೆ ಆಗಮಿಸಲಿದ್ದಾರೆ.

11 ರಾಷ್ಟ್ರಗಳ ಬ್ರಿಕ್ಸ್ ಸಮೂಹ

ಬ್ರಿಕ್ಸ್ ಶೃಂಗಸಭೆಯನ್ನು ಈ ವರ್ಷ ಭಾರತ ಆಯೋಜಿಸುತ್ತಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಮೂಲ ಸದಸ್ಯ ರಾಷ್ಟ್ರಗಳಾಗಿವೆ. 2024ರಲ್ಲಿ ಈ ಸಮೂಹಕ್ಕೆ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಹಾಗೂ ಸಂಯುಕ್ತ ಅರಬ್ ಎಮಿರೇಟ್ಸ್ ಸೇರ್ಪಡೆಯಾದವು. 2025ರಲ್ಲಿ ಇಂಡೋನೇಷ್ಯಾವನ್ನೂ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಒಟ್ಟು 11 ರಾಷ್ಟ್ರಗಳ ಪ್ರತಿನಿಧಿಗಳು ಬ್ರಿಕ್ಸ್ ಶೃಂಗಸಭೆಗಾಗಿ ಭಾರತದ ರಾಜಧಾನಿಗೆ ಆಗಮಿಸಲಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande